ಮಧ್ಯಪ್ರದೇಶ : ಕುಟುಂಬದ 8 ಸದಸ್ಯರ ಕೊಂದು ಆತ್ಮಹತ್ಯೆಗೆ ಶರಣು

ಮಧ್ಯಪ್ರದೇಶ: 

   ರಾಜ್ಯದ ಛಿಂದ್​ವಾಡದಲ್ಲಿ ಕಳೆದ ರಾತ್ರಿ ಭೀಕರ ಹತ್ಯಾಕಾಂಡ ನಡೆದಿದೆ. ತನ್ನ ಕುಟುಂಬದ 8 ಸದಸ್ಯರನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

   “ತಮಿಯಾದ ಬೋದಲ್ ಕಚಾರ್ ಗ್ರಾಮದಲ್ಲಿ ಬುಡಕಟ್ಟು ಕುಟುಂಬದ ಎಂಟು ಜನರನ್ನು ಕುಟುಂಬದ ಮುಖ್ಯಸ್ಥ ಕೊಡಲಿಯಿಂದ ಕೊಲೆಗೈದು, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ” ಎಂದು ಹೆಚ್ಚುವರಿ ಎಸ್ಪಿ ಅವಧೇಶ್ ಸಿಂಗ್ ತಿಳಿಸಿದ್ದಾರೆ.

ಈ ಘಟನೆಯಿಂದ ಇಡೀ ಗ್ರಾಮವೇ ಸ್ತಬ್ಧವಾಗಿದೆ. ಕುಟುಂಬದ ಮಾಲೀಕ ಮಾನಸಿಕವಾಗಿ ನೊಂದಿದ್ದ. ಹೀಗಾಗಿ ತನ್ನ ಮನೆಯವರನ್ನೆಲ್ಲ ಕೋಪಗೊಂಡು ಕೊಲೆ ಮಾಡಿದ್ದಾನೆ ಎಂದು ಗ್ರಾಮದ ಜನರು ಹೇಳಿದ್ದಾರೆ. ಆದರೆ ಈ ವಿಚಾರವನ್ನು ಪೊಲೀಸರು ಖಚಿತಪಡಿಸಿಲ್ಲ.

ಮಹುಲ್ಜಿರ್ ಮತ್ತು ಛಿಂದ್ವಾರಾದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಯುತ್ತಿದೆ.

Recent Articles

spot_img

Related Stories

Share via
Copy link
Powered by Social Snap