‘ನ್ಯಾಷನಲ್ ಕ್ರಷ್’ ರಶ್ಮಿಕಾ ಮಂದಣ್ಣ ವಯಸ್ಸೆಷ್ಟು ಗೊತ್ತೇ….? : ಗೆಸ್‌ ಮಾಡಿ

ಬೆಂಗಳೂರು:

     ‘ನ್ಯಾಷನಲ್ ಕ್ರಷ್’ ರಶ್ಮಿಕಾ ಮಂದಣ್ಣ  ಅವರ ಅಭಿನಯದ ಪುಷ್ಪ 2 ಹಾಗೂ ದಿ ಗರ್ಲ್ ಫ್ರೆಂಡ್ ಚಿತ್ರದ ಫಸ್ಟ್ ಲುಕ್ ಫೋಸ್ಟರ್ ಗಳನ್ನು ಅವರ 28ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

     ಪುಷ್ಪ 2 ಚಿತ್ರದ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಸ್ಟರ್ ನಲ್ಲಿ ಸೀರೆ ಗೆಟಪ್, ಜೊತೆಗೆ ಸಾಕಷ್ಟು ಅಭರಣ ತೊಟ್ಟು ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 15 ರಂದು ಚಿತ್ರ ಬಿಡುಗಡೆ ಆಗಲಿದೆ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕ ನಟನಾಗಿ ಅಭಿನಯಿಸಿದ್ದಾರೆ.

    ದಿ ಗರ್ಲ್ ಫ್ರೆಂಡ್ ಚಿತ್ರ ತಂಡ ಕೂಡಾ ಫೋಸ್ಟರ್ ಬಿಡುಗಡೆ ಮೂಲಕ ರಶ್ಮಿಕಾ ಮಂದಣ್ಣ ಅವರಿಗೆ ಶುಭ ಕೋರಿದೆ. ಸದ್ಯ ಹುಟ್ಟುಹಬ್ಬ ಆಚರಿಸಿಕೊಳ್ಳಲು ಅಬುದಾಬಿಗೆ ರಶ್ಮಿಕಾ ಮಂದಣ್ಣ ತೆರಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap