ಗೃಹಜ್ಯೋತಿ : ಅರ್ಜಿ ಸಲ್ಲಿಕೆ ಹೇಗೆ…!

ತುಮಕೂರು :

    ಹೊಸ ಸರ್ಕಾರ ಬಂದಾಗಿನಿಂದಲೂ ರಾಜ್ಯದಲ್ಲಿ ಬದಲಾವಣೆ ಮತ್ತು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಕೆಲಸಗಳು ಮತ್ತು ಬಡವರ ಮನಸಿನಲ್ಲಿ ಬಂದ ಕೆಲವೇ ದಿನಗಳಲ್ಲಿ  ಒಂದು ಗೌರವಯುತವಾದ ಸ್ಥಾನ ಸಂಪಾದಿಸಿದೆ ಸಿ ಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ.

    ಇನ್ನು ಕೆಲ ದಿನಗಳ ಹಿಂದೆ ಅಂದರೆ ಮೇ ತಿಂಗಳಾಂತ್ಯದ ವೇಳೆಗೆ ಸರ್ಕಾರ ತಾನು ಹೇಳದ್ದ ಅಷ್ಟೂ ಗ್ಯಾರೆಂಟಿಗಳ ಜಾರಿಗೆಂದು ಕ್ರಮ ಕೈಗೊಂಡು ಕೊಟ್ಟ ಮಾತು ಉಳಿಸಿಕೊಳ್ಳವಲ್ಲಿ ಯಶಸ್ವಿಯೂ ಆಗಿದೆ ಮತ್ತು ಅದರ ಸಾಕಾರಕ್ಕಾಗಿ ಮುನ್ನುಗುತ್ತಿದೆ ಮತ್ತು ಕೆಲ ಕಷ್ಟಗಳು ಎದುರಾದರೂ ಸಹ ದೈರ್ಯದಿಂದ ಎದುರಿಸಿ ನಿಲ್ಲುವ ವಿಶ್ವಾಸವನ್ನು ಸರ್ಕಾರ ತೋರಿಸುತ್ತಿದೆ.

     ಇನ್ನು ರಾಜ್ಯ ಸರ್ಕಾರ ಮಹಳಾ ಸಬಲೀಕರಣದ ಉದ್ದೇಶದಿಂದ ಜಾರಿಗೆ ತಂದಿರುವ ಮತ್ತು ತರಲು ಹೊರಟಿರುವ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಇಡೀ ದೇಶದಲ್ಲಿಯೇ ಸಂಚಲನಾತ್ಮಕವಾಗಿದೆ .ಮತ್ತು ಗೃಹಜ್ಯೋತಿ

ಗೃಹಜ್ಯೋತಿ : ಅರ್ಜಿ ಸಲ್ಲಿಕೆ ಹೇಗೆ…? 

    200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಪಡೆಯಲು ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮೊದಲ ದಿನ 55 ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. 

     ಸೇವಾ ಸಿಂಧು ಪೋರ್ಟಲ್ (https://sevasindhugs.karnataka.gov.in) ಮೂಲಕ ಉಚಿತ ವಿದ್ಯುತ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.  ಅರ್ಜಿ ಸಲ್ಲಿಸುವವರು ತಮ್ಮ ಗ್ರಾಹಕ ಐಡಿಯನ್ನು ವೆಬ್ ಪೋರ್ಟಲ್ ನಲ್ಲಿ ನಮೂದಿಸಬೇಕಾಗಿದ್ದು, ಜೊತೆಗೆ ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ ನ್ನು ದಾಖಲಿಸಬೇಕಾಗುತ್ತದೆ. 

 

     ಇನ್ನು ಬಿಡುಗಡೆಯಾದ ದಿನವೇ ಸರ್ವರ್‌ ಸಮಸ್ಯೆ ಎಂದು ಕೆಲವರು ಬೊಬ್ಬೆ ಹೊಡೆದಿದ್ದು ಇದೇ ಆದರೆ ಗಮನಿಸಿ ಯಾವುದೇ ಮಗು ಹುಟ್ಟಿದ ದಿನವೇ ನಡೆದಾಡುವುದಿಲ್ಲ ಹಾಗೆಯೇ ಯಾವುದೇ ವೆಬ್‌ ಜಾಲತಾಣ ಬಿಡುಗಡೆಯಾದ ದಿನವೇ ಎಲ್ಲಾ ರೀತಿಯಿಂದ ಸದೃಢವಾಗಿರದು ಒಳಬರುವ ಟ್ರಾಫಿಕ್‌ ಎಷ್ಟು ಮತ್ತು ಮಾಹಿತಿ ಎಷ್ಟು ಪ್ರೊಸೆಸ್‌ ಮಾಡಬಹುದು ಎಂಬುದು ನಿಧಾನವಾಗಿ ಉನ್ನತೀಕರಿಸಬೇಕಾಗುತ್ತದೆ , ನಂತರದಲ್ಲಿ ಬಾಡಿಗೆ ಮನೆಯಲ್ಲಿರುವವರು ಭಯ ಪಡುವ ಅಗತ್ಯವಿಲ್ಲ ಎಂದು ಮಾನ್ಯ ಸಚಿವರೇ ಹೇಳಿದ್ದಾರೆ . 

ಇನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವದಿಂದ ಎಲ್ಲಡೆ ಅಪಪ್ರಚಾರವಾಗುತ್ತಿರುವುದು ಸಾಮಾನ್ಯವಾಗಿದೆ. ನಂತರದ ದಿನಗಳಲ್ಲಿ ಈ ವೆಬ್‌ ಪೊರ್ಟಲ್‌ ಇನ್ನು ಸಧೃಢವಾಗಲಿದ್ದು ಜನರಿಗೆ ಅನುಕೂಲವಾಗಲಿದೆ , ಇನ್ನು ಕೆಲವರು ನಮಗೆ ಈ ಆನ್‌ ಲೈನ್‌ ಎಲ್ಲಾ ಬೇಡ ಎನ್ನುವವರು ಆಯಾ ಎಸ್ಕಾಂ ಕಛೇರಿಗಳಿಗೆ ಭೇಟಿ ನೀಡಿ ಸಹ ಅರ್ಜಿ ಸಲ್ಲಿಸಬಹುದಾಗಿದೆ.

ಗೃಹಲಕ್ಷ್ಮಿ : ಅರ್ಜಿ ಸಲ್ಲಕೆ ಮತ್ತು ಷರತ್ತುಗಳ ಒಂದು ಮುನ್ನೊಟ

ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿ 2000 ರೂಪಾಯಿ ಸಹಾಯಧನ ಪಡೆಯಲು ರಾಜ್ಯ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದೆ.ಮಹಿಳೆಯರ ಪಾಲಿನ ಆಶಾಕಿರಣದಂತಿರುವ ಗೃಹಲಕ್ಷ್ಮಿ ಇನ್ನು ಕೆಲವೇ ದಿನಗಳಲ್ಲಿ ಜಾರಿಯಾಗಲಿದ್ದು ಈ ಅರ್ಜಿ ಸಲ್ಲಿಕೆಗೆ ಯಾವುದೇ ಅಂತಿಮ ಗಡುವು ಇಲ್ಲ ಎಂದು ಸಚಿವರೇ ತಿಳಿಸಿದ್ದಾರೆ.

ಪ್ರಮುಖ ಷರತ್ತುಗಳೇನು?
1. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
2. ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಯೋಜನೆ ಅನ್ವಯಿಸಲಿದೆ.
3. ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಯ ಬ್ಯಾಂಕ್‌ ಖಾತೆ ಮತ್ತು ಆಧಾರ ಕಾರ್ಡ್‌ ಗಳನ್ನು ಜೋಡಣೆ ಮಾಡಬೇಕು.
4. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ಪಾವತಿದಾರರಾಗಿದ್ದಲ್ಲಿ ಸೌಲಭ್ಯ ಸಿಗುವುದಿಲ್ಲ.
5. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿಯು ಜಿಎಸ್‌ಟಿ ರಿಟರ್ನ್ ಸಲ್ಲಿಸುವವರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಈ ಯೋಜನೆಯ ಫಲಾನುಭವಿಗಳು ಜೂನ್ 15 ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಬೇಕು. ಆ ನಂತರ ಜುಲೈ 15 ರಿಂದ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್ 15 ರಂದು ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಅರ್ಜಿದಾರರು ಸೇವಾ ಸಿಂಧು ಪೋರ್ಟಲ್‌ ಮೂಲಕವಾಗಲಿ ಅಥವಾ ಭೌತಿಕವಾಗಿಯಾಗಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap