ನ.17ರೊಳಗೆ HSRP ಕಡ್ಡಾಯಗೊಳಿಸಿದ ಕೋರ್ಟ್‌…!

ಬೆಂಗಳೂರು:

        2019ಕ್ಕಿಂತ ಮುಂಚಿನ ವಾಹನಗಳಿಗೆ  HSRP ಅಳವಡಿಸೋದು ಕಡ್ಡಾಯಗೊಳಿಸಲಾಗಿದೆ. ಇಂತಹ ಸರ್ಕಾರದ ಕಡ್ಡಾಯ ಆದೇಶ ತಡೆಗೆ ಹೈಕೋರ್ಟ್ ನಕಾರ ವ್ಯಕ್ತ ಪಡಿಸಿದೆ. ಹೀಗಾಗಿ ನವೆಂಬರ್.17ರ ಒಳಗಾಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಳನ್ನು ವಾಹನಗಳಿಗೆ ಅಳವಡಿಸಿಕೊಳ್ಳೋದು ಕಡ್ಡಾಯವಾಗಿದೆ.

     ರಾಜ್ಯ ಸರ್ಕಾರವು ಆ.17, 2023ರಂದು ಏಪ್ರಿಲ್.1, 2019ಕ್ಕೂ ಮುಂಚಿನ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನೋಂದಣಿ ಫಲಕ ಅಳವಡಿಸೋದು ಕಡ್ಡಾಯಗೊಳಿಸಲಾಗಿತ್ತು. ಈ ಆದೇಶಕ್ಕೆ ತಡೆ ನೀಡುವಂತೆ ಕರ್ನಾಟಕ ಹೈಕೋರ್ಟ್ ಗೆ ಹಲವು ಸಂಸ್ಥೆಗಳು ತಕರಾರು ಅರ್ಜಿಯನ್ನು ಸಲ್ಲಿಸಿದ್ದವು.

    ಈ ಅರ್ಜಿಯ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ಬಿ.ಎಂ ಶ್ಯಾಮ ಪ್ರಸಾದ್ ಅವರನ್ನೊಳಗೊಂಡ ನ್ಯಾಯಪೀಠವು, ಸರ್ಕಾರದ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿದೆ. ಅಲ್ಲದೇ ಏಪ್ರಿಲ್.1, 2019ರ ಮುಂಚಿತವಾಗಿ ನೋಂದಾಯಿಸಿಕೊಂಡ ವಾಹನಗಳು 90 ದಿನಗಳ ಒಳಗಾಗಿ ಹೊಸ ಪರವಾನಗಿ ನೋಂದಣಿ ಫಲಕ ಹೊಂದಬೇಕು ಅಂತ ಸೂಚಿಸಿದೆ. ಅಂದರೆ ನವೆಂಬರ್.17ರ ಒಳಗಾಗಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸೋದು ಕಡ್ಡಾಯವಾಗಿದೆ.

    ಇನ್ನೂ ಹೆಚ್ ಎಸ್ ಆರ್ ನಂಬರ್ ಪ್ಲೇಟ್ ತಯಾರಕರಿಗೆ ಅನುಮೋದನೆ ನೀಡಲು ಅನುಸರಿಸಬೇಕಾದ ಪ್ರಕ್ರಿಯೆ ಅಂತಿಮಗೊಳಿಸಿ ಪ್ರಕಟಿಸಬೇಕು. ಹೈಕೋರ್ಟ್ ಗೆ ಸಲ್ಲಿಸಿರುವ ಎಲ್ಲಾ ಅರ್ಜಿದಾರರು ಹೆಚ್ ಎಸ್ ಆರ್ ಪಿ ಜಾರಿಯಲ್ಲಿ ಪಾಲ್ಗೊಳ್ಳಲು ವಾಹನ ಉತ್ಪಾದಕರ ಒಪ್ಪಿಗೆಯೊಂದಿಗೆ ಅವಕಾಶ ನೀಡಬೇಕು. ಇದು ಅರ್ಜಿ ಕುರಿತ ಅಂತಿಮ ತೀರ್ಪಿನ ಆದೇಶಕ್ಕೆ ಒಳಪಟ್ಟಿರುತ್ತದೆ ಅಂತ ಸ್ಪಷ್ಟಪಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap