ಹುಳಿಯಾರು :
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರಾಜ್ಯದಾದ್ಯಂತ 620 ಕೋಟಿ ಲಾಭಾಂಶ ಹಂಚಿಕೆಯನ್ನು ಮಾಡುತ್ತಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ರಚಿಸಲ್ಪಟ್ಟ 1615 ಸ್ವಸಹಾಯ ಸಂಘಗಳಿಗೆ 6 ಕೋಟಿ ಮೊತ್ತದ ಲಾಭಾಂಶವನ್ನು ಸ್ವ ಸಹಾಯ ಸಂಘಗಳ ಸದಸ್ಯರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ತುಮಕೂರು ಜಿಲ್ಲೆ ಉತ್ತರ ವಿಭಾಗದ ಜಿಲ್ಲಾ ನಿರ್ದೇಶಕರಾದ ಡಿ.ದಿನೇಶ್ ಅವರು ತಿಳಿಸಿದರು.
ಹುಳಿಯಾರು ಹೋಬಳಿಯ ಯಳನಾಡು ಕಾರ್ಯಕ್ಷೇತ್ರದ ‘ಸಿದ್ಧರಾಮೇಶ್ವರ’ ಹಾಗೂ ‘ಕಲ್ಲೇಶ್ವರ’ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ ಮಾಡಿ ಅವರು ಮಾತನಾಡಿದರು.
ಕೋವಿಡ್ ಸಂಕಷ್ಟದ ಸಮಯದಲ್ಲಿ ಈ ಲಾಭಾಂಶವು ಅನೇಕರಿಗೆ ಒಂದು ರೀತಿಯಲ್ಲಿ ಉಪಯೋಗವಾಗುವ ದೃಷ್ಟಿಯಿಂದ ವಿತರಣೆ ಮಾಡಲಾಗುತ್ತಿದ್ದು, ಎಲ್ಲಾ ಸಂಘಗಳ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ನಡೆಸಿ ಎಂದು ಕಿವಿ ಮಾತನ್ನು ಹೇಳಿದರು.
ತಾಲೂಕಿನ ಯೋಜನಾಧಿಕಾರಿ ಎಲ್.ಬಿ.ಪ್ರೇಮಾನಂದಯವರು ಪ್ರಸ್ತಾವನೆಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ರೇಷ್ಮಾ, ಸಿರಿ ರೈತ ಉತ್ಪಾದಕ ಕಂಪನಿಯ ಬಾಲಚಂದ್ರ, ಸೇವಾಪ್ರತಿನಿಧಿ ಜಗದೀಶ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
