ಹುಳಿಯಾರು :
ಕುಡಿಯುವ ನೀರಿನ ಸಿಸ್ಟನ್ ಬಳಿ ಬೆಳೆದಿರುವ ಅನಗತ್ಯ ಗಿಡಗಂಟೆಗಳು ತಕ್ಷಣ ತೆರವು ಮಾಡಿ ಸ್ವಚ್ಚತೆ ಕಾಪಾಡುವಂತೆ ದೊಡ್ಡಎಣ್ಣೇಗೆರೆ ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.
ದೊಡ್ಡಎಣ್ಣೇಗೆರೆ ಸರ್ಕಲ್ನಿಂದ ಹುಳಿಯಾರಿನ ಮುಖ್ಯರಸ್ತೆಯಲ್ಲಿರುವ ಸಿಸ್ಟನ್, ಇಲ್ಲಿನ ಅನೇಕ ನಿವಾಸಿಗಳಿಗೆ ನೀರಿನ ಆಸರೆಯಾಗಿದೆ. ಆದರೆ ಸಿಸ್ಟನ್ ಬಳಿ ಅನಗತ್ಯವಾಗಿ ಗಿಡಗಂಟೆಗಳು ಬೆಳೆದಿದ್ದರೂ ಗ್ರಾಪಂ ನಿಂದ ತೆರವು ಮಾಡದೆ ನಿರ್ಲಕ್ಷ್ಯಿಸಿದ್ದಾರೆ.
ಪರಿಣಾಮ ಸಿಸ್ಟನ್ ಬಳಿ ಕೊಳಚೆಯಾಗಿ ಸೊಳ್ಳೆಗಳ ಆಶ್ರಯತಾಣವಾಗಿ ಮಾರ್ಪಟ್ಟಿದೆ. ಅಲ್ಲದೆ ಅನೇಕ ದಿನಗಳ ಕಾಲ ನೀರು ನಿಂತು ದುರ್ನಾತ ಬೀರುತ್ತಿದೆ. ಹಾಗಾಗಿ ನೀರು ತರಲೋಗುವ ಗ್ರಾಮಸ್ಥರಿಗೆ ಸೊಳ್ಳೆ ಕಾಟ ಎದುರಿಸುವುದು ಮತ್ತು ದುರ್ನಾತ ಕುಡಿಯುವುದು ಅನಿವಾರ್ಯವಾಗಿದೆ.
ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯ್ತಿಯವರು ಗಿಡಗಂಟೆಗಳನ್ನು ತೆರವು ಮಾಡಿ ಸ್ವಚ್ಚತೆ ಕಾಪಾಡಿ, ಸೊಳ್ಳೆ ಮತ್ತು ದುರ್ನಾತದಿಂದ ಮುಕ್ತಿ ಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ