ಮೋಟಿಹಳ್ಳಿ ಕೆರೆ ಮೀನು ಪಾಶುವಾರು 41 ಸಾವಿರಕ್ಕೆ ಹರಾಜು

ಹುಳಿಯಾರು :

      ಹೋಬಳಿಯ ಕೋರಗೆರೆ ಗ್ರಾಪಂ ಮೋಟಿಹಳ್ಳಿ ಕೆರೆ ಮೀನು ಪಾಶುವಾರು ಹರಾಜು ಪ್ರಕ್ರಿಯೆ ಶುಕ್ರವಾರ ನಡೆಯಿತು.
ಮೀನು ಪಾಶುವಾರು ಹಕ್ಕನ್ನು 2021ರ ಜುಲೈ 23 ರಿಂದ 2024 ರ ಜೂನ್ 3 ರ ವರೆವಿಗೆ 3 ವರ್ಷದ ಅವಧಿಗೆ ಹರಾಜು ಮೂಲಕ ವಿಲೇವಾರಿ ಮಾಡಲಾಯಿತು.

      ಹರಾಜಿನಲ್ಲಿ 9 ಮಂದಿ ಭಾಗವಹಿದ್ದು, ನಾಗರಾಜು ಎಂಬುವವರಿಗೆ 41 ಸಾವಿರ ರೂಗಳಿಗೆ ಹರಾಜು ನಿಂತಿದ್ದು ಇವರಿಗೆ 3 ವರ್ಷದ ಅವಧಿಗೆ ಮೀನು ಪಾಶುವಾರು ನೀಡಲಾಯಿತು.

      ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್.ಗಂಗಾಧರಯ್ಯ, ಅಧ್ಯಕ್ಷೆ ತಾರಾ, ಗ್ರಾಪಂ ಸದಸ್ಯರುಗಳಾದ ಕೆ.ಕೆ.ಹನುಮಂತಪ್ಪ, ದಿನೇಶ್, ಲತಾ, ಲಿಲಿತಾ, ಗ್ರಾಮಸ್ಥರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link