ಯಳನಾಡು ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿ ರಚನೆ

 ಹುಳಿಯಾರು : 

      ಹುಳಿಯಾರು ಹೋಬಳಿ, ಯಳನಡು ಗ್ರಾಮದ ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವಸ್ಥಾನಕ್ಕೆ ನೂತನವಾಗಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ.

      ಶ್ರೀ ಸಿದ್ದರಾಮೇಶ್ವರಸ್ವಾಮಿ ದೇವಾಲಯವು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ ‘ಬಿ’ ಅಧಿಸೂಚಿತ ಸಂಸ್ಥೆಯಾಗಿದ್ದು, ಈ ದೇವಾಲಯಕ್ಕೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಉದ್ದೇಶದಿಂದ ಆಸಕ್ತ ಭಕ್ತಾಧಿಗಳಿಂದ, ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಪ್ರಕಟಣೆಗೆ ಸ್ಪಂದಿಸಿ ನಿಗಧಿತ ಅವಧಿಯೊಳಗೆ 31 ಅರ್ಜಿಗಳು ಸ್ವೀಕೃತವಾಗಿದ್ದವು.

      ವ್ಯವಸ್ಥಾಪನಾ ಸಮಿತಿಗೆ ಸದಸ್ಯತ್ವವನ್ನು ಕೋರಿ ಸ್ವೀಕೃತವಾಗಿರುವ 31 ಅರ್ಜಿಗಳ ಬಗ್ಗೆ ತುಮಕೂರು ಪೊಲೀಸ್ ಅಧೀಕ್ಷಕರಿಂದ ಸತ್ಯಾಪನಾ ವರದಿ ಪಡೆದು ದೇವಸ್ಥಾನಕ್ಕೆ ಅರ್ಚಕರು ಸೇರಿ 9 ಮಂದಿ ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು 3 ವರ್ಷಗಳ ಅವಧಿಗೆ ರಚಿಸಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.

      ಎಂ.ಎಸ್.ದಯಾನಂದ, ವಸಂತಕುಮಾರಿ, ವೈ.ಎಂ.ಶೋಭ, ವೈ.ಎಸ್.ನಟರಾಜು, ವೈ.ಕೆ.ಜಗದೀಶ್, ವೈ.ಎಸ್.ವಿಜಯಕುಮಾರ್, ವೈ.ಜಿ.ಮೋಹನ್‍ಕುಮಾರ್, ಮಹಾಲಿಂಗಪ್ಪ ಅವರಗಳು ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link