ಹುಳಿಯಾರು :
ಹುಳಿಯಾರು ಹೋಬಳಿಯ ದಸೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ನೂತನ ಸದಸ್ಯರುಗಳು ಮಾಸ್ಕ್ ಮತ್ತು ಸ್ಯಾನಿಟೈಸರ್ ಉಚಿತವಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ನೂತನ ಸದಸ್ಯ ಮರಿಯಪ್ಪ ಮಾತನಾಡಿ, ಕೊರೊನಾದಿಂದಾಗಿ ಶಾಲೆಗಳು ಮುಚ್ಚಿದ್ದರಿಂದ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದರು. ಆನ್‍ಲೈನ್ ತರಗತಿ ಮಾಡಿದರಾದರೂ ನೆಟ್‍ವರ್ಕ್ ಸಮಸ್ಯೆ, ಬೋಧನೆಯ ಸಮಸ್ಯೆಯಿಂದಾಗಿ ವಿಫಲವಾಗಿತ್ತು. ಈಗ ಎಂದಿನಂತೆ ತರಗತಿ ಆರಂಭಿಸಿರುವುದು ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಎಂದರು.
ಕೊರೊನಾ ಸೋಂಕಿಗೆ ಲಸಿಕೆ ಬಂದು ಶೇಕಡ ನೂರರಷ್ಟು ಪರಿಣಾಮಕಾರಿಯಾಗುವರೆವಿಗೂ ಎಲ್ಲರೂ ಎಚ್ಚರಿಕೆಯಿಂದರಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಪಠ್ಯ ಬೋಧನೆಯ ಜೊತೆಗೆ ಕೋವಿಡ್ ನಿಯಮ ತಿಳಿಸಬೇಕಿದೆ. ಅದರಲ್ಲೂ ನಿತ್ಯ ಮಾಸ್ಕ್ ಶುಚಿಯಾಗಿಸಿಕೊಂಡು ಧರಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಚಿದಾನಂದ, ಸತೀಶ್, ನಾಗರಾಜ್, ಲತಾ ಸತೀಶ್, ತ್ರಿವೇಣಿ, ಜಯಣ್ಣ ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.
