ಫಲಾನುಭವಿಗಳಿಗೆ ಸಚಿವರಿಂದ ಸಹಾಯಧನ ವಿತರಣೆ

 ಹುಳಿಯಾರು : 

      ಹುಳಿಯಾರು ಪಟ್ಟಣ ಪಂಚಾಯಿತಿಯ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಸಹಾಯಧನ ವಿತರಿಸಿದರು.

      ಪಂಚಾಯ್ತಿಯ 2019-20 ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಅನುದಾನದಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ ಶೇಕಡ 24.10 ರ ಯೋಜನೆಯಡಿ ಮನೆಗಳ ಮೇಲ್ಛಾವಣಿ ದುರಸ್ತಿಗಾಗಿ 21 ಫಲಾನುಭವಿಗಳಿಗೆ ಸಹಾಯಧನವಾಗಿ 2.5 ಲಕ್ಷ ರೂಗಳನ್ನು ವಿತರಿಸಲಾಯಿತು.

      ಶೇಕಡ 24.10 ರ ಯೋಜನೆಯಡಿ 12 ಮಂದಿ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ 50 ಸಾವಿರ ರೂ, ಶೇಕಡ 7.25 ರ ಯೋಜನೆಯಡಿ 16 ಮಂದಿ ಸಾಮಾನ್ಯ ವಿದ್ಯಾರ್ಥಿಗಳಿಗೆ 75 ಸಾವಿರ ರೂಗಳನ್ನು ವಿಧ್ಯಾಭ್ಯಾಸಕ್ಕಾಗಿ ನೀಡಲಾಯಿತು.

      ಶೇಕಡ 7.25 ರ ಯೋಜನೆಯಡಿ 6 ಮಂದಿ ಬೀದಿ ಬದಿ ವ್ಯಾಪಾರಸ್ಥರಿಗೆ ತಲಾ 10 ಸಾವಿರದಂತೆ 60 ಸಾಔಇರ ರೂ. ಸಹಾಯಧನ ಹಾಗೂ 2020-21ನೇ ಸಾಲಿನ ಶೇಕಡ 5ರ ಯೋಜನೆಯಡಿ ನಾಲ್ವರು ವಿಕಲಚೇತನರಿಗೆ ಅಡುಗೆ ಅನಿಲ ಸಂಪರ್ಕ ವಿತರಣೆಯನ್ನು ಮಾಡಲಾಯಿತು.

      ಪಪಂ ಮುಖ್ಯಾಧಿಕಾರಿ ಮಂಜುನಾಥ್, ಎಂಜಿನಿಯರ್ ಮಂಜುನಾಥ್, ಸಿಬ್ಬಂದಿಗಳಾದ ಜುನೇದ್, ರಾಜಣ್ಣ, ತಾಪಂ ಮಾಜಿ ಅಧ್ಯಕ್ಷ ಕೆಂಕೆರೆನವೀನ್, ತಾಪಂ ಮಾಜಿ ಸದಸ್ಯ ವಸಂತಯ್ಯ, ಜಯಣ್ಣ, ಪಪಂ ಮಾಜಿ ಸದಸ್ಯ ಕೋಳಿಶ್ರೀನಿವಾಸ್, ಭಜರಂಗದಳದ ಮೋಹನ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link