ಹುಳಿಯಾರು :
ಗ್ರಾಮವೊಂದರ ನೀರಿನ ಸಮಸ್ಯೆ ವಾಟ್ಸಪ್‍ನಲ್ಲಿ ವೈರಲ್ ಆಗಿದ್ದೇ ತಡ ತಕ್ಷಣ ಪಿಡಿಒ ಸ್ಪಂದಿಸಿ ಸಮಸ್ಯೆ ಬಗೆಹರಿಸಿದ ಪ್ರಸಂಗ ಹುಳಿಯಾರು ಹೋಬಳಿಯ ಬರಕನಹಾಲ್ ಪಂಚಾಯ್ತಿಯಲ್ಲಿ ಜರುಗಿದೆ.
ಬರಕನಹಾಲ್ ಪಂಚಾಯ್ತಿಯ ಬರಕನಹಾಲ್ ತಾಂಡ್ಯಕ್ಕೆ ನೀರು ಸರಬರಾಜು ಮಾಡುತ್ತಿದ್ದ ಕೊಳವೆಬಾವಿಯ ಮೋಟರ್ ಸುಟ್ಟು ಹೋಗಿತ್ತು. ಪರಿಣಾಮ ಊರಿನಲ್ಲಿ ನೀರಿನ ಸಮಸ್ಯೆ ಸೃಷ್ಠಿಯಾಗಿ ಅಕ್ಕಪಕ್ಕದ ಜಮೀನಿನಲ್ಲಿ ಮಾಲೀಕರನ್ನು ಕಾಡಿ ಬೇಡಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಬಗ್ಗೆ ಅಲ್ಲಿನ ನಿವಾಸಿಗಳು ವಾಟ್ಸಪ್‍ನಲ್ಲಿ ಪೋಸ್ಟ್ ಮಾಡಿ ಪಂಚಾಯ್ತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದ ಇಲ್ಲಿನ ಪಿಡಿಓ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಮುಂದೆ ನಿಂತು ಕೊಳವೆ ಬಾವಿಯಿಂದ ಸುಟ್ಟಿದ್ದ ಮೋಟರ್ ಎತ್ತಿಸಿದರು.
ಸಂಜೆಯೊಳಗೆ ಸುಟ್ಟಿದ್ದ ಮೋಟರ್ ರಿಪೇರಿ ಮಾಡಿಸಿ ಪುನಃ ಕೊಳವೆ ಬಾವಿಗೆ ಬಿಟ್ಟು ಗ್ರಾಮಕ್ಕೆ ಎಂದಿನಂತೆ ನೀರು ಸರಬರಾಜು ಮಾಡಿದರು. ಪಿಡಿಒ ಅವರ ಈ ಸ್ಪಂದನೆಗೆ ಗ್ರಾಮಸ್ಥರಿಂದ ಪ್ರಶಂಸೆಯ ಮಾತುಗಳು ಕೇಳಿಬಂದವು. ಪಿಡಿಓ ಜೊತೆ ಸಿಬ್ಬಂದಿಗಳಾದ ಓಂಕಾರ ಮೂರ್ತಿ, ರಮೇಶ್, ಬಾಲದೇವರಹಟ್ಟಿ ಚಂದ್ರು, ಬೆಳವಾಡಿ ದೇವರಾಜು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
