ಹುಳಿಯಾರು :
ಹುಳಿಯಾರಿನ 11 ನೇ ವಾರ್ಡ್‍ಗೆ ಸೇರಿರುವ ಸೋಮಜ್ಜನ ಪಾಳ್ಯದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಪ.ಪಂ ಮುಖ್ಯಾಧಿಕಾರಿಗಳು ಗಮನಹರಿಸುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.
ನೀರಿನ ಮೂಲ ಲಭ್ಯವಿದ್ದರೂ ಪೂರೈಕೆ ಸರಿಯಾಗಿ ಆಗುತ್ತಿಲ್ಲವಾದ್ದರಿಂದ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೆ ನೀರಿನ ಸಿಸ್ಟನ್‍ಗಳಿಗೆ ಸರಿಯಾದ ನಲ್ಲಿ ವ್ಯವಸ್ಥೆ ಕೂಡ ಇಲ್ಲದೆ ರಾತ್ರಿ ಲೋಡ್ ಆದ ನೀರು ವ್ಯರ್ಥವಾಗಿ ಹರಿಯುತ್ತದೆ.
ಹುಳಿಯಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿರುವುದರಿಂದ ಮೂಲಭೂತ ಸೌಕರ್ಯ ಕಲ್ಪಿಸಲು ಅನುದಾನದ ಕೊರತೆ ಕಂಡು ಬರುವುದಿಲ್ಲ. ಆದರೂ ಪಟ್ಟಣ ಬಿಟ್ಟು ಹಳ್ಳಿಕಡೆ ಅಧಿಕಾರಿಗಳು ಬಾರದಿರುವುದರಿಂದ ಅವರಿಗೆ ಈ ಸಮಸ್ಯೆಯ ಅರಿವು ಆಗುತ್ತಿಲ್ಲ.
ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀರಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಿ ಸಮರ್ಪಕ ನೀರು ಪೂರೈಕೆಗೆ ಮುಂದಾಗುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ