ಹುಳಿಯಾರು :
ಭಾರಿ ಮಳೆಯಿಂದ ಗೋಡೆ ಕುಸಿದು ಬಿದ್ದ ಪರಿಣಾಮ ಎರಡು ಕುರಿಗಳು ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ಕಾರೆಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗ್ರಾಮದ ನಿಂಗರಾಜು ಅವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ. ನಿರಂತರವಾಗಿ ಐದಾರು ದಿನಗಳಿಂದ ಮಳೆ ಸುರಿದ ಪರಿಣಾಮ ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿದಿದೆ. ಪರಿಣಾಮ ಮನೆಯೊಳಗಿದ್ದ ಕುರಿಗಳು ಸಾವನ್ನಪ್ಪಿವೆ.
ಬದುಕು ಕಟ್ಟಿಕೊಳ್ಳಲು ಉಪಕಸುಬಾಗಿ ಕುರಿ ಸಾಕಾಣಿಕೆ ಮಾಡುತ್ತಿದ್ದ ನಿಂಗರಾಜು ಅವರಿಗೆ ಕುರಿಗಳ ಸಾವು ಭರಿಸಲಾಗದ ನಷ್ಟವಾಗಿದೆ. ಪಶು ಇಲಾಖೆಯು ಸರ್ಕಾರದ ಅನುಗ್ರಹ ಯೋಜನೆಯಲ್ಲಿ ಪರಿಹಾರ ಕೊಡಿಸುವಂತೆ ಲಿಂಗರಾಜು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ