ತುಮಕೂರು:
ತುಮಕೂರಿನ ಅಶೋಕ ಲಾಡ್ಜ್ ಅಂಡ್ ಹೋಟೆಲ್ನಲ್ಲಿ ಹೆಂಡತಿಯ ಕಾಲು ಕತ್ತರಿಸಿದ ಗಂಡ, ತಾನೂ ಹೊಟ್ಟೆಗೆ ಚೂರಿ ಹಾಕಿಕೊಂಡಿದ್ದಾನೆ. ಘಟನೆಯಲ್ಲಿ ಮಧುಗಿರಿ ಮೂಲದ ಅನಿತಾ ಎಂಬ ಮಹಿಳೆ ಗಾಯಗೊಂಡಿದ್ದು, ಪತಿ ಬಾಬುನನ್ನು (34) ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಾಲ್ಕು ವರ್ಷದ ಹಿಂದೆ ಬಾಬು ಅನಿತಾಳನ್ನು ಮದುವೆಯಾಗಿದ್ದ. ಬೆಳಗ್ಗೆ 6 ಗಂಟೆ ಹೊತ್ತಿಗೆ ಅಶೋಕ ಲಾಡ್ಜ್ಗೆ ದಂಪತಿ ಬಂದಿತ್ತು. ಬ್ಯಾಗ್ನಲ್ಲಿ ಬಾಬು ಮಚ್ಚು ತೆಗೆದುಕೊಂಡು ಬಂದಿದ್ದ. ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದಲ್ಲೇ ಹೆಂಡತಿಯನ್ನು ಲಾಡ್ಜ್ಗೆ ಕರೆದುಕೊಂಡು ಬಂದಿದ್ದ.
ಗಾಯಗೊಂಡ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೆಂಡತಿಯ ಕಾಲು ಕತ್ತರಿಸಿದ್ದೇನೆ, ಆಸ್ಪತ್ರೆಗೆ ಸೇರಿಸಬೇಕು ಅಂತ ಬಾಬು ಹೇಳಿಕೊಂಡಿದ್ದಾನೆ. ಸದ್ಯ ಆರೋಪಿ ತುಮಕೂರು ನಗರ ಪೊಲೀಸರ ವಶದಲ್ಲಿದ್ದು, ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ