ಓಡಿ ಹೋಗುವ ಮುಖ್ಯಮಂತ್ರಿ ನಾನಲ್ಲ :ಬಸವರಾಜ ಬೊಮ್ಮಾಯಿ

ಬೆಂಗಳೂರು

    ಬಿಜೆಪಿ ಮೇ 13ರಂದು 125ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ಮತ್ತೆ ಕನ್ನಡಮಾತೆಯ ಸೇವೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸದಿಂದ ನುಡಿದರು.

    ಶಿಗ್ಗಾವಿಯಲ್ಲಿ ಇಂದು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿತ್ತು. ಮೂಲಸೌಕರ್ಯದ ಕೊರತೆ, ನೀರಿನ ಸಮಸ್ಯೆ ವ್ಯಾಪಕವಾಗಿತ್ತು ಎಂದು ಟೀಕಿಸಿದರು. 2 ಏತ ನೀರಾವರಿ ಯೋಜನೆ ಅನುಷ್ಠಾನದ ಮೂಲಕ 100ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಿದ್ದಾಗಿ ವಿವರಿಸಿದರು. ಗ್ರಾಮೀಣ, ಜಿಲ್ಲಾ ರಸ್ತೆ, ರಾಜ್ಯ, ರಾಷ್ಟಿçÃಯ ಹೆದ್ದಾರಿ ಸೇರಿ 2 ಸಾವಿರ ಕಿಮೀ ರಸ್ತೆಗಳ ನಿರ್ಮಾಣವಾಗಿದೆ ಎಂದು ತಿಳಿಸಿದರು.

    ಬಡತನ ಶಾಪವಲ್ಲ. ಸಾಯುವವರೆಗೆ ಬಡತನ ಇರಬೇಕಿಲ್ಲ. ಪ್ರಾಮಾಣಿಕತೆಯಿಂದ ದುಡಿಯಲು ಅವಕಾಶ ಕೊಟ್ಟಿದ್ದೇವೆ. ಈ ಭಾಗದಲ್ಲಿ ಅತಿ ಹೆಚ್ಚು ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಶಹರಗಳ ಸಂಪೂರ್ಣ ಅಭಿವೃದ್ಧಿ, ಪ್ರತಿ ಮನೆಗೆ ನಳದಿಂದ ನೀರು ಕೊಡುತ್ತಿದ್ದೇವೆ. ಮೋದಿಜಿ ಅವರ ನೇತೃತ್ವದ ಕೇಂದ್ರ ಸರಕಾರವು ಜಲಜೀವನ್ ಮಿಷನ್ ಅಡಿಯಲ್ಲಿ ಎಲ್ಲ ಹಳ್ಳಿಗಳಿಗೂ ನೀರಿನ ಸೌಕರ್ಯ ಕೊಡುತ್ತಿದ್ದೇವೆ ಎಂದರು. ಅಭಿವೃದ್ಧಿಗಾಗಿ ಜನರು ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದು ನುಡಿದರು.

    ಜೀವನದ ಕೊನೆ ಉಸಿರು ಇರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ. ಕ್ಷೇತ್ರ ಬದಲಿಸುವ, ಓಡಿ ಹೋಗುವ ಮುಖ್ಯಮಂತ್ರಿ ನಾನಲ್ಲ. ಏನೇ ಆದರೂ ನನ್ನ ಜನರ ಮುಂದೆ ತೀರ್ಮಾನ ಆಗಬೇಕು. ನೀವೇ ಮಾಲೀಕರು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

    ನನ್ನಲ್ಲಿ ಆತ್ಮಸ್ಥೈರ್ಯ ಇದೆ. ಪ್ರಾಮಾಣಿಕ ಸೇವೆಯ ಕುರಿತು ನಂಬಿಕೆ ಇದೆ. ಆಯುರ್ವೇದ ಆಸ್ಪತ್ರೆ, ವೆಟರಿನರಿ ಪಾಲಿಟೆಕ್ನಿಕ್, ಟೆಕ್ಸ್ಟೈಲ್ ಪಾರ್ಕ್ ಸೇರಿ ಅನೇಕ ಅಭಿವೃದ್ಧಿ ಕಾರ್ಯ ಆಗಿದೆ. ಬಂಕಾಪುರವು ಮುಂದಿನ ದಿನಗಳಲ್ಲಿ ತಾಲ್ಲೂಕಾಗಲಿದೆ ಎಂದು ತಿಳಿಸಿದರು. ನನ್ನ ಸಾವಾದರೆ ಶಿಗ್ಗಾವಿ ಮಣ್ಣಿನಲ್ಲೇ ಅಂತ್ಯಸAಸ್ಕಾರ ಮಾಡಿ ಎಂದು ಮನವಿ ಮಾಡಿದರು. ಚಿತ್ರನಟ ಕಿಚ್ಚ ಸುದೀಪ್ ಅವರು ಮಾತನಾಡಿ, ಜನಮನ ಗೆದ್ದ ಸಿಎಂ ಬೊಮ್ಮಾಯಿ ಮಾಮ. ಅವರಿಗೆ ಕೆಲಸ ಮಾಡಲು ಇನ್ನಷ್ಟು ಸಮಯ ಬೇಕಿದೆ. ಜನರಿಗೆ ಒಳಿತಿಗಾಗಿ ಅವರನ್ನು ಬೆಂಬಲಿಸಿ ಎಂದು ವಿನಂತಿಸಿದರು.

    ಹೇಗಿದ್ದೀರ ಎಂದೇ ಕಿಚ್ಚ ಸುದೀಪ್ ಮಾತು ಆರಂಭಿಸಿದರು. ಸುಂದರವಾಗಿ ಸುಸ್ವಾಗತ ನೀಡಿ ಪ್ರೀತಿ ತೋರಿದ್ದೀರಿ ಎಂದರಲ್ಲದೆ, ಬೊಮ್ಮಾಯಿ ಮಾಮ ಅವರು ಕಡಿಮೆ ಅವಧಿಯಲ್ಲಿ ತುಂಬ ಕೆಲಸ ಮಾಡಿದ ವ್ಯಕ್ತಿ ಎಂದು ತಿಳಿಸಿದರು. ನಾಮ್‌ಕೆವಾಸ್ತೆ ಅಲ್ಲ ಕಾಮ್‌ಕೆವಾಸ್ತೆ ಸಿಎಂ ಅವರು ಎಂದು ನುಡಿದರು. ನಾನು ಒಬ್ಬ ಭಾರತೀಯನಾಗಿ ಪ್ರಧಾನಿ ಮೋದಿ ಅವರ ಕೆಲಸಗಳನ್ನು ಮೆಚ್ಚುತ್ತೇನೆ. ನಿಮ್ಮ ನಂಬಿಕೆ ಇದ್ದರೆ ಕೆಲಸ ಚೆನ್ನಾಗಿ ಆಗುತ್ತದೆ ಎಂದು ತಿಳಿಸಿದರು. ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ಹಾಡನ್ನು ಅವರು ಉದಾಹರಿಸಿದರು.

    ಇದಕ್ಕೂ ಮೊದಲು ಬಿಜೆಪಿಯ ರಾಷ್ಟಿçÃಯ ಅಧ್ಯಕ್ಷ ಜೆ.ಪಿ. ನಡ್ಡಾರವರು ಶಿಗ್ಗಾವಿಯಲ್ಲಿ ಸಿಎಂ ಬಸರಾಜ ಬೊಮ್ಮಾಯಿಯೊಂದಿಗೆ ಬೃಹತ್ ರೋಡ್ ಷೋ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಚಿವರಾದ ಬಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಮುರಗೇಶ ನಿರಾಣಿ, ಚಿತ್ರ ನಟ ಸುದೀಪ್, ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ ಪಾಟೀಲರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap