ನನ್ನ ಮತ ಹಾಕಿದ್ದೇನೆ ಹೊರತು ನಾನು ಯಾರ ಪರವೂ ಪ್ರಚಾರ ಮಾಡಿಲ್ಲ: ಗುಬ್ಬಿ ಶಾಸಕ

ತುಮಕೂರು:


ವಿ.‌ಪ. ಚುನಾವಣೆಯಲ್ಲಿ ನನ್ನ ಮತ ಹಾಕಿದ್ದೇನೆ ಹೊರತು ನಾನು ಯಾರ ಪರವಾಗಿಯು ಪ್ರಚಾರ ಮಾಡಿಲ್ಲ. ಯಾವ ಪಕ್ಷದವರು ಸಹ ನನ್ನನ್ನು ಸಂರ್ಪಕಿಸಿಲ್ಲ ಎಂದು ಅಸಮಾಧಾನಿತ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಹೇಳಿದರು. ಗುಬ್ಬಿಯ ಪಪಂ ಬಳಿ ಸುcದ್ದಿಗಾರರೊಂದಿಗೆ ಮಾತನಾಡಿ, ವಿ. ಪ.ಚುನಾವಣೆಯಲ್ಲಿ ನಾನು ತಟಸ್ಥನಾಗಿದ್ದೇನೆ.

ನಮ್ಮ ಬೆಂಬಲಿಗರಿಗೂ ನಿಮಗೆ ಇಷ್ಟಬಂದವರಿಗೆ ಮತ ಹಾಕಿಕೊಳ್ಳಿ ಎಂದು ಹೇಳಿದ್ದೇನೆ ಎಂದರು. ಜೆಡಿಎಸ್ ಅಭ್ಯರ್ಥಿ ಕಣದಲ್ಲಿ ಇಲ್ಲ ಎಂದು ಹೇಳಲಾಗುತಿದೆ ಎಂಬ ಪ್ರಶ್ನೆಗೆ ಉತ್ತರಿಸಿ ಅದರ ಬಗ್ಗೆ ನನಗೆ ಗೊತ್ತಿಲ್ಲ ನಾನು ತಲೆ ಕಡಿಸಿಕೊಂಡಿಲ್ಲ. ನಾನು ಚುನಾವಣಾ ಕ್ಯಾಂಪೇನ್ ಮಾಡಿಲ್ಲ. ಚುನಾವಣೆ ಬಗ್ಗೆಯೇ ತಲೆಕೆಡಿಸಿಕೊಂಡಿಲ್ಲ.

ಇನ್ನು ಯಾರು ಮೈತ್ರಿ ಮಾಡಿಕೊಂಡರೆ ನಮಗೇನು ಎಂದರು. ಜೆಡಿಎಸ್ ನಾಯಕರು ಕಾಂಗ್ರೆಸ್ ಗೆ ಬುದ್ಧಿ ಕಲಿಸಬೇಕು ಎನ್ನುತ್ತಾರೆ ನೀವು ನಾಯಕರಿಗೆ ಬುದ್ಧಿಕಲಿಸಬೇಕು ಎಂದು ಹೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ ನಾನು ಯಾರಿಗೂ ಬುದ್ದಿ ಕಲಿಸುವಷ್ಟು ಬೆಳೆದಿಲ್ಲ. ಕೆಲವರು ನಮ್ಮಿಂದ ದೂರ ಉಳಿದಿದ್ದಾರೆ ಹೊರತು ನಮ್ಮ ಅಧ್ಯಕ್ಷರಾಧಿಯಾಗಿ, ಪದಾಧಿಕಾರಿಗಳು, ಸದಸ್ಯರು ಜೆಡಿಎಸ್ ಕಟ್ಟಿ ಬೆಳೆಸಿದವರು ಎಲ್ಲರೂ ಒಟ್ಟಾಗಿಯೇ ಇದ್ದೇವೆ. ನಾವು‌ ಯಾವುದೇ ಪ್ರಚಾರದಲ್ಲಿ ಭಾಗವಹಿಸಿಲ್ಲ.‌

೨೭ ಗ್ರಾಪಂಗಳಲ್ಲಿ ೨೪-೨೫ ಗ್ರಾಪಂಗಳಲ್ಲಿ ನಮ್ಮ ಬೆಂಬಲಿಗರೇ ಇದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಫೈಟ್ ಇದೆ. ಏನಾಗುತ್ತದೆ ಎಂಬುದನ್ನು‌ ಕಾದು ನೋಡೋಣ. ನಮಗೂ ಕೆ.ಎನ್. ರಾಜಣ್ಣ ಅವರಿಗೂ ರಾಜಕೀಯ ಭಿನ್ನಾಭಿಪ್ರಾಯವೇ ಹೊರತು ವೈಯಕ್ತಿಕವಾಗಿ ನಾವು ಚೆನ್ನಾಗಿಯೇ ಇದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದು ಪಕ್ಷ ವಿರೋಧಿ ಕೆಲಸವಾಗುತ್ತದೆ. ನಮ್ಮನ್ನು ಪಕ್ಷದಿಂದ ಹೊರ ಹಾಕಲಾಗಿದೆ. ಪಕ್ಷಕ್ಕೆ ನಮ್ಮ‌ಅವಶ್ಯಕತೆ ಇಲ್ಲ.ಹಾಗಾಗು ನಾನು ಯಾರ ಪರವಾಗಿಯೂ ಪ್ರಚಾರ ಮಾಡಿಲ್ಲ ಇನ್ನೂ ಒಂದೂವರೆ ವರ್ಷವಿದೆ ಅಲ್ಲಿಯವರೆಗೂ ನಾನು ಜೆಡಿಎಸ್ ನಲ್ಲಿಯೇ ಇರುತ್ತೇನೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link