ಪ್ರಶಾಂತ್ ಸಂಬರ್ಗಿಯನ್ನು ಸುಮ್ಮನೆ ಬಿಡಲ್ಲ; ಪ್ರಕಾಶ್ ರಾಜ್

ಬೆಂಗಳೂರು :

   ತಮ್ಮ ನಕಲಿ ಫೋಟೊ ಹಾಕಿ ಸುಳ್ಳು ಪ್ರಚಾರ ಮಾಡಿದ್ದ ಪ್ರಶಾಂತ್ ಸಂಬರ್ಗಿ ವಿರುದ್ಧ ಪ್ರಕಾಶ್ ರಾಜ್ ಕಿಡಿ ಕಾರಿದ್ದು, ಆತನನ್ನು ಸುಮ್ಮನೇ ಬಿಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ಪ್ರಕಾಶ್ ರಾಜ್ ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ನಕಲಿ ಫೋಟೊವನ್ನು ಹಂಚಿಕೊಂಡಿದ್ದ ಪ್ರಶಾಂತ್ ಸಂಬರ್ಗಿ ವಿರುದ್ಧ ಮೈಸೂರಿನಲ್ಲಿ ನಟ ಪ್ರಕಾಶ್ ರಾಜ್ ದೂರು ದಾಖಲಿಸಿದ್ದಾರೆ.

   ಜನವರಿ 27 ರಂದು ಪ್ರಶಾಂತ್ ಸಂಬರ್ಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರಕಾಶ್ ರಾಜ್ ಕುಂಭ ಮೇಳದಲ್ಲಿ ಸ್ನಾನ ಮಾಡುತ್ತಿದ್ದಾರೆ ಎಂದು ನಕಲಿ ಫೋಟೊ ಹಂಚಿಕೊಂಡಿದ್ದರು. ಜೊತೆಗೆ ಪ್ರಕಾಶ್ ರಾಜ್ ಮಾಡಿದ ಪಾಪವೆಲ್ಲ ಪರಿಹಾರವಾಗಿದೆ ಎಂದು ನಂಬುತ್ತೇನೆ ಎಂದಿದ್ದರು. ಈ ಫೋಟೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದ ಪ್ರಕಾಶ್ ರಾಜ್, ಇದು ಸುಳ್ಳು ಸುದ್ದಿ, ಇಂತಹ ಜೋಕರ್ ಗಳ ವಿರುದ್ಧ ದೂರು ಕೊಡುತ್ತೇನೆ, ಪರಿಣಾಮಗಳನ್ನು ಎದುರಿಸಲು ಸಜ್ಜಾಗು ಎಂದಿದ್ದರು.

   ಜನವರಿ 29ರಂದು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದ ಪ್ರಕಾಶ್ ರಾಜ್, ಹಬ್ಬಿಸಿದ್ದ ಸುಳ್ಳು ಸುದ್ದಿಯನ್ನು ಮಹಾವೀರ ಸಂಬರ್ಗಿ ತನ್ನ ಖಾತೆಯಿಂದ ಹೆದರೆ ತೆಗೆದಾಯ್ತು, ಆದರೆ ಮಾಡಿದ ಕಿಡಿಗೇಡಿತನದಿಂದ ತಪ್ಪಿಸಿಕೊಳ್ಳಲಾಗದು ಎಂದು ಯಾರಾದರು ಉಗಿದು ಹೇಳಿ ಎಂದಿದ್ದರು. ಮೈಸೂರಿನಲ್ಲಿ ದೂರು ದಾಖಲು ಹೈದರಾಬಾದ್ನಲ್ಲಿದ್ದ ಪ್ರಕಾಶ್ ರಾಜ್, ಶನಿವಾರ ಮೈಸೂರಿಗೆ ಬಂದಿದ್ದು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದರು.

   ಎಫ್ಐಆರ್ ಪ್ರತಿ ಪಡೆದುಕೊಂಡ ಅವರು ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಕುಂಭಮೇಳ ಸ್ನಾನ ಪುಣ್ಯದ ಕಾರ್ಯ, ಹಿಂದೂಗಳಿಗೆ ನಂಬಿಕೆ ಇರುವವರಿಗೆ ಇದು ಶ್ರೇಷ್ಠ ಕಾರ್ಯಕ್ರಮ. ನಾನು ಅಲ್ಲಿ ಸ್ನಾನ ಮಾಡಿದ್ದೇನೆ ಎಂದು ಇದರಲ್ಲೂ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಮೊದಲಿನಿಂದ ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಿದ್ದರು ಈಗ ಕುಂಭ ಮೇಳದಲ್ಲಿ ಸ್ನಾನ ಮಾಡಿದ್ದೇನೆ ಎಂದು ಫೇಕ್ ಫೋಟೊ ಹಾಕಿ ಪ್ರಚಾರ ಮಾಡಿದ್ದಾರೆ. ಇಂತಹ ಸುಳ್ಳುಗಳನ್ನು ಹಬ್ಬಿಸುವುದಕ್ಕೆ ಕಡಿವಾಣ ಹಾಕಬೇಕು, ಇಲ್ಲದಿದ್ದರೆ ಭವಿಷ್ಯದಲ್ಲಿ ಇದರಿಂದ ದೊಡ್ಡ ಸಮಸ್ಯೆಗಳು ಉಂಟಾಗುತ್ತವೆ.

   ನಾನು ದೂರು ಕೊಟ್ಟಿದ್ದೇನೆ ಪ್ರಕರಣ ದಾಖಲಾಗಿದೆ. ಅವರು ಕೋರ್ಟ್ಗೆ ಬರಲೇಬೇಕು ನಾನು ಇಷ್ಟಕ್ಕೆ ಸುಮ್ಮನೆ ಬಿಡುವುದಿಲ್ಲ. ಪ್ರಶಾಂತ್ ಸಂಬರ್ಗಿ ವಿರುದ್ಧ ಈಗಾಗಲೇ ಹಲವು ಪ್ರಕರಣ ಬಾಕಿ ಇವೆ, ಈ ಹಿಂದೆ ನಟಿಯೊಬ್ಬರಿಗೂ ಕಿರುಕುಳ ನೀಡಿದ್ದ ಬಗ್ಗೆಯೂ ದೂರು ಕೊಡಲಾಗಿತ್ತು, ನಾನು ದೂರು ಕೊಡಲು ಬರುತ್ತಿದ್ದಂತೆ ಅನೇಕರು ಅವನನ್ನು ಸುಮ್ಮನೆ ಬಿಡಬೇಡಿ ಎಂದು ಮೆಸೇಜ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link