ಅಮೆರಿಕಾದ ನಿರ್ಬಂಧಗಳಿಗೆ ಕ್ಯಾರೆ ಎನ್ನದ ಭಾರತೀಯ ತೈಲ ಕಂಪೆನಿಗಳು

0
55

ನವದೆಹಲಿ :

     ಇರಾನ್ ತೈಲ ಪೂರೈಕೆ ಮೇಲೆ ಅಮೆರಿಕ ಹೇರಿರುವ ನಿರ್ಬಂಧದ ನಡುವೆಯೂ ಭಾರತೀಯ ಮೂಲದ ಎರಡು ತೈಲ ಕಂಪೆನಿಗಳು ತೈಲ ಖರೀದಿಗೆ ಮುಂದಾಗಿವೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ತಿಳಿಸಿದ್ದಾರೆ.

    ನವೆಂಬರ್ 4 ರಂದು  ಇರಾನ್ ನಿಂದ ಕಚ್ಚಾ ತೈಲ ಭಾರತಕ್ಕೆ ಬರುವ ನರೀಕ್ಷೆಯಿದೆ ಅಮೇರಿಕಾ ತಾನು ಬೆಳೆಯಲು ಬೇರೆ ದೇಶಗಳ ಮೇಲೆ ಹೇರುವ  ನಿರ್ಬಂಧಗಳ ಬಗ್ಗೆ ತೀವ್ರ ಸ್ತರದಲ್ಲಿ ಪ್ರತಿಭಟನೆಯು ನಡೆಯುತ್ತಿದೆ.

     ಭಾರತ ಈ ನಿರ್ಬಂಧ  ತಪ್ಪಿಸಿಕೊಂಡು ಮಕ್ತ ವ್ಯಾಪಾರದಲ್ಲಿ ತೊಡಗಲು ನೆಡೆಸಿದ ಪ್ರಯತ್ನಗಳನ್ನು ಅಮೆರಿಕ ಸರಾಸಗಟಾಗಿ ನಿರಾಕರಿಸಿದೆ. 

     ಈ ನಿರಾಕರಣೆಗೆ ಉತ್ತರವಾಗಿ  ನಮ್ಮ ದೇಶದ ಎರಡು ತೈಲ ಕಂಪೆನಿಗಳು ಇರಾನ್ ನಿಂದ ತೈಲ ತರಿಸಲು ಕರಡು ಪ್ರತಿಗಳನ್ನು ಇರಾನ್ ಗೆ ಕಳುಇಸಿದ್ದು ನವೆಂಬರ್ ಕೊನೆಯ ವಾರದ ಹಹೊತ್ತಿಗೆ ಆಮದು ಮಾಡಿಕೊಳ್ಳುವ ನಿರೀಕ್ಷೆ ಇದೆ  ಎಂದು ಎನರ್ಜಿ ಫೋರಂ ಉದ್ಘಾಟನಾ ಸಮ್ಮೇಳನದಲ್ಲಿ ಶ್ರೀ ಪ್ರಧಾನ್ ಹೇಳಿದರು.

     ಈಗ ಅಮೆರಿಕಾಕ್ಕೆ ಇರುವ ಎಕೈಕ ಪ್ರಶ್ನೆ ನಾವು ಭಾರತಕ್ಕೆ ವಿನಾಯಿತಿ ನೀಡಿದ್ದೇವೆಯೇ ಇಲ್ಲವೇ ಎಂಬ ಗೊಂದಲದ ನಡುವೆ ನಮ್ಮ ದೇಶದ ಕಂಪೆನಿಗಳು ಮುಂದೆ ಹೋಗಿ ಕಚ್ಚಾ ತೈಲ ತರಿಸಲು ಆರ್ಡರ್ ಬುಕ್ ಮಾಡಿವೆ ಎಂದು ಹೇಳಿದ್ದಾರೆ.

     ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ಗಳು ಈ ಎರಡು ಕಂಪನಿಗಳು 1.25 ದಶಲಕ್ಷ ಟನ್ಗಳಷ್ಟು ಕಚ್ಚಾ ತೈಲಕ್ಕೆ ಬೇಡಿಕೆ ಇಟ್ಟೆವೆ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕೃತ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

LEAVE A REPLY

Please enter your comment!
Please enter your name here