ಏ.20ರಂದು ನಾಮಪತ್ರ ಸಲ್ಲಿಸುವೆ : ಎಂ.ಟಿ.ಕೃಷ್ಣಪ್ಪ

ತುರುವೇಕೆರೆ:

     ವಿಧಾನಸಭಾ ಚುನಾವಣೆಯಲ್ಲಿ ಏ.20 ಗುರುವಾರದಂದು ಅದಿಕೃತವಾಗಿ ಜೆಡಿಎಸ್ ಪಕ್ಷದಿಂದ ಸಾವಿರಾರು ಕಾರ್ಯಕರ್ತ ಜೊತೆ ನಾಮಪತ್ರ ಸಲ್ಲಿಸುವುದಾಗಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

      ಪಟ್ಟಣದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರ ಈಗಾಗಲೇ ಸಾಮಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು ಗುರುವಾರ ಸಾವಿರಾರು ಕಾರ್ಯಕರ್ತರು ಸೇರಿಸಿ ರ‍್ಯಾಲಿ ಮಾಡುವ ಮೂಲಕ ನಾಮಪತ್ರ ಸಲ್ಲಿಸಲಾಗುವುದು. ಪಟ್ಟಣದ ಕೃಷ್ಣ ಚಿತ್ರ ಮಂದಿರದಿಂದ ಮೆರವಣಿಗೆ ಮೂಲಕ ಪಟ್ಟಣದ ಉಡಸಲಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಸಾವಿರಾರು ಕಾರ್ಯಕರ್ತರ ಜೊತೆಯಲಲಿ ತಾಲೂಕು ಕಚೇರಿಗೆ ತೆರಳಿ ಅದಿಕೃತವಾಗಿ ನಾಮಪತ್ರ ಸಲ್ಲಿಸಲಾಗುವುದು ಕ್ಷೇತ್ರದ ಜೆಡಿಎಸ್‌ನ ಎಲ್ಲ ಕಾರ್ಯಕರ್ತರು ಆಗಮಿಸುವಂತೆ ಕೋರಿದ್ಧಾರೆ.

      ಗುಬ್ಬಿ ತಾಲೂಕಿನ ಯಾದವ ಮುಖಂಡ ಬೆಟ್ಟಸ್ವಾಮಿ ಬಿಜೆಪಿ ಬಿಟ್ಟು ಜೆಡಿಎಸ್ ಸೇರ್ಪಡೆಯಾಗಿದ್ದು ಜೆಡಿಎಸ್ ಪಕ್ಷಕ್ಕೆ ಬಹಳ ಶಕ್ತಿ ಬಂದಿದೆ. ನಾಮಪತ್ರ ಸಲ್ಲಿಸುವ ವೇಳೆ ಮುಖಂಡ ಬೆಟ್ಟಸ್ವಾಮಿ ಸೇರಿದಂತೆ ಹಲವು ಮುಖಂಡರು ಆಗಮಿಸಿದ್ದಾರೆ. ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯ ಕಾರ್ಯಕ್ರಮಗಳನ್ನು ಈಗಾಗಲೇ ಕ್ಷೇತ್ರದ ಮನೆ ಮನೆ ಪ್ರಚಾರ ಮಾಡಲಾಗಿದೆ. ಕ್ರಮ ಸಂಖ್ಯೆ ಸಿಕ್ಕ ನಂತರ ಪ್ರಚಾರ ಪ್ರಾರಂಬಿಸಲಾಗುವುದು ಎಂದು ತಿಳಿಸಿದರು.

    ಶಾಸಕ ಮಸಾಲಜಯರಾಮ್ ಬಿಜೆಪಿ ಅಭ್ಯರ್ಥಿಯಾಗಿದ್ದು ತೇಜು ಮಸಾಲ ಕಂಪನಿಯ ಮಾಲೀಕರಾಗಿದ್ದಾರೆ. ತೇಜು ಮಸಾಲ ಕಂಪನಿ ಜಾಯಿರಾತು ಟಿವಿ ಹಾಗೂ ಪತ್ರಿಯಲ್ಲಿ ಪ್ರಕಟವಾಗುತ್ತಿದ್ದು ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಬಾವ ಬೀಳಲಿದೆ. ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದ್ದು ಚುನಾವಣೆ ಮುಗಿಯುವರೆಗೂ ತೇಜು ಕಂಪನಿಯ ಜಾಯಿರಾತು ಪ್ರಕಟಿಸದಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

    ತಾಲೂಕಿನ ಯಾದವ ಮುಖಂಡ ಸಾದರಹಳ್ಳಿ ಉಗ್ರೇಗೌಡ ಬಿಜೆಪಿ ಸೇರ್ಪಡೆಯಾಗಿದ್ದಾರೆ ಅವರ ವೈಯಕ್ತಿಕ ವಿಚಾರ ಆದರೆ ಕಾಂಗ್ರೆಸ್ ಪಕ್ಷದಲ್ಲಿದ್ದ ಉಗ್ರಪ್ಪರವರು ಜೆಡಿಎಸ್ ಪಕ್ಷದ ವಿರುದ್ದವಾಗಿ ಅಸಂಬದ್ದವಾಗಿ ಮಾತನಾಡಿದ್ದಾರೆ. ನಾನು ಶಾಸಕನಾಗಿದ್ದಾಗ ಎಲ್ಲ ಗೊಲ್ಲರಹಟ್ಟಿಗಳಿಗೂ ರಸ್ತೆ, ಕುಡಿಯುವ ನೀರು, ಆಶ್ರಯ ಮನೆಗಳು ನೀಡಿದ್ದನೆ ಇದ್ದೆಲ್ಲವನ್ನು ತಿಳಿದಿರುವ ಉಗ್ರಪರವರು ಜಾಣ ಕುರುಡರಂತೆ ಜೆಡಿಎಸ್ ಪಕ್ಷದ ವಿರುದ್ದವಾಗಿ ಮಾತನಾಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಲು ಅದಿಕಾರ ಕೊಟ್ಟವರು ಯಾರು ಕೂಡಲೇ ನಿಲ್ಲಸಬೇಕು ಮತ್ತೆ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬಾರದು ಎಂದರು.

    ಗೋಷ್ಟಿಯಲ್ಲಿ ಮುಖಂಡರಾದ ರಮೇಶ್‌ಗೌಡ, ಯೋಗೀಶ್, ಹೆಮಂತಕುಮಾರ್, ತಿಮ್ಮೇಗೌಡ, ರಂಗಸ್ವಾಮಿ, ಕೃಷ್ಣಯ್ಯ, ನಾಗರಾಜು, ರಘು ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap