ಕಲೆಕ್ಷನ್‌ ಇಲ್ಲಾ ಅಂದರೆ ತೆಗೆದುಹಾಕಿ : ಆರ್‌ ಚಂದ್ರು

ಬೆಂಗಳೂರು: 

     ‘ಕಬ್ಜಾ’ ಚಿತ್ರದ ಗಳಿಕೆ ಕಡಿಮೆಯಾಗುತ್ತಿದೆ ಎಂಬ ಆರೋಪಗಳಿಗೆ ಖಡಕ್ ಆಗಿ ಉತ್ತರಿಸಿರುವ ನಿರ್ದೇಶಕ ಆರ್ ಚಂದ್ರು, ‘ಕಲೆಕ್ಷನ್ ಇಲ್ಲ ಅಂದ್ರೆ ಥಿಯೇಟರ್ ನಿಂದ ‘ಕಬ್ಜಾ’ ಚಿತ್ರವನ್ನು ತೆಗೆದು ಹಾಕಿ’ ಎಂದು ಹೇಳಿದ್ದಾರೆ.

     ಕಬ್ಡಾ ಬಿಡುಗಡೆಯಾದ ಮೊದಲ ದಿನ ಚಿತ್ರ 50 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. 2ನೇ ದಿನಕ್ಕೆ ಈ ಗಳಿಕೆ 100 ಕೋಟಿ ದಾಟಿತ್ತು. ಇದೀಗ ಚಿತ್ರ 6ನೇ ದಿನಕ್ಕೆ ಕಾಲಿಟ್ಟಿದ್ದು, ಚಿತ್ರದ ಗಳಿಕೆ 30 ಕೋಟಿ ರೂಪಾಯಿ ಗಳಿಸಲು ಹೆಣಗಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಚಿತ್ರ ಸುಮಾರು 4000 ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ತೆರೆಕಂಡ ಬಳಿಕ ದೇಶದ ನಾನಾ ಭಾಗಗಳಲ್ಲಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಎಲ್ಲ ಆರೋಪಗಳಿಗೆ ಇದೀಗ ನಿರ್ದೇಶಕ ಆರ್ ಚಂದ್ರು ಖಡಕ್ ಉತ್ತರ ನೀಡಿದ್ದಾರೆ.

  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap