ಬೆಳಗಾವಿ:
ಬೆಳಗಾವಿ ತಾಲೂಕಿನ ಮಚ್ಚೆ ಎಂಬಲ್ಲಿ ಗಂಡನ ಮೇಲೆ ಹೆಂಡತಿ ಕುದಿಯುತ್ತಿರುವ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಗಂಡನ ಮೈಯೆಲ್ಲಾ ಸುಟ್ಟುಹೋಗಿದ್ದು, ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನೈತಿಕ ಸಂಬಂಧದ ಶಂಕೆಯಿಂದ, ಗಂಡ ಸುಭಾಷ್ ಪಾಟೀಲ್ (55) ಮೇಲೆ ಹೆಂಡತಿ ವೈಶಾಲಿ ಪಾಟೀಲ್ ಸುಡುವ ಎಣ್ಣೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾಳೆ.
ವೈಶಾಲಿ ಗಂಡ ಸುಭಾಷ್ ಸಿಲಿಂಡರ್ ವಿತರಣೆ ಕೆಲಸ ಮಾಡುತ್ತಿದ್ದರು. ಗಂಡ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಹೆಂಡತಿ ವೈಶಾಲಿಗೆ ಸಂಶಯವಿತ್ತು. ಈ ವಿಚಾರದಲ್ಲಿ ಇಬ್ಬರಿಗೂ ಜಗಳವಾಗುತ್ತಿತ್ತು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ, ಮನೆಗೆ ಬಂದ ಗಂಡನ ಮೇಲೆ ಸುಡುವ ಎಣ್ಣೆ ತಂದು ಹೆಂಡತಿ ಸುರಿದಿದ್ದಾಳೆ. ಗಾಯಾಳು ಸುಭಾಷ್‌ರನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.








