ಮಿಡಿಗೇಶಿ :
ಮಿಡಿಗೇಶಿ ಪೋಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಷ್ಮಿಪುರದ ಹಳ್ಳದಲ್ಲಿ ಮರಳನ್ನು ಅಕ್ರಮವಾಗಿ ಆಂಧ್ರ ರಾಜ್ಯಕ್ಕೆ ಸಾಗಿಸುತ್ತಿದ್ದ ನಂಬರ್ ಪ್ಲೇಟ್ ಇಲ್ಲದೆರಡು ಟ್ರಾö್ಯಕ್ಟರ್‌ಗಳ ಮತ್ತು ಕೆ.ಎ.64. ಎಂ0572 ನಂಬರಿನ ಜೆಸಿಬಿಯ ಚಾಲಕರನ್ನು ಪೊಲೀಸರು ಬಂಧಿಸಿ, ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಮಸ್ಥರಿಂದ ಮಿಡಿಗೇಶಿ ಪೋಲೀಸ್ ಠಾಣೆಗೆ ದೂರು ಬಂದ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಶಿವಣ್ಣ ಮತ್ತು ಸಿಬ್ಬಂದಿ ಮಾ.11 ರಂದು ಕಾರ್ಯಾಚರಣೆ ನಡೆಸಿ, ಎರಡು ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸುತ್ತಿದ್ದುವುಗಳನ್ನು ಬಂಧಿಸಿರುತ್ತಾರೆ. ಹಾಗೂ ಒಂದು ಜೆ.ಸಿ.ಬಿ ಮರಳು ತುಂಬಲು ಬಳಸುತ್ತಿದ್ದ ಸೀಜ್ ಮಾಡಿರುತ್ತಾರೆ ಹಾಗೂ ಸದರಿ ವಾಹನಗಳ ಚಾಲಕರುಗಳನ್ನು ದಸ್ತಗಿರಿ ಮಾಡಿ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ಚಾಲಕರುಗಳಾದ ರಂಗನಾಥ, ಮಹೇಶ್ ಮತ್ತು ಬಿ.ಎನ್.ಗೌಡ ಇವರುಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ಇವರುಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿರುತ್ತಾರೆಂದು ಪ್ರಜಾಪ್ರಗತಿಗೆ ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








