ರೈತ ಸಮುದಾಯಕ್ಕೆ ಮಹತ್ವದ ಮಾಹಿತಿ

ಹಾವೇರಿ :

   ಪಿ.ಎಂ.ಕಿಸಾನ್’ ಆರ್ಥಿಕ ನೆರವಿಗೆ `ಇ-ಕೆವೈಸಿ’ ಕಡ್ಡಾಯ

ಪಿ ಎಂ ಕಿಸಾನ್ ಯೋಜನೆಯಡಿ ಜನವರಿ 1 ರಂದು ಪಿ ಎಂ ಕಿಸಾನ ಯೋಜನೆಯ 10ನೇ ಕಂತಿನ ಆರ್ಥಿಕ ನೆರವು ಬಿಡುಗಡೆಗೊಳಿಸಲಾಗುತ್ತಿದ್ದು.

    ಈ ಆರ್ಥಿಕ ನೆರವು ಪಡೆಯುತ್ತಿರುವ ಅರ್ಹ ಫಲಾನುಭವಿಗಳು e-KYC ಅಪ್‍ಡೆಟ್ ಮಾಡಿಸುವುದು ಕಡ್ಡಾಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಅವರು ತಿಳಿಸಿದ್ದಾರೆ.

            e-KYC ಯನ್ನು ನಾಗರೀಕ ಸೇವಾ ಕೇಂದ್ರಗಳಲ್ಲಿ ಹಾಗೂ ಪಿ ಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟ್ https://pmkisan.gov.inನ Farmers corner ನಲ್ಲಿ update ಮಾಡಿಕೊಳ್ಳುವುದು ಅತಿ ಅವಶ್ಯವಾಗಿರುತ್ತದೆ ಹಾಗೂ ಬ್ಯಾಂಕ ಖಾತೆಗಳಿಗೆ ಆಧಾರ ನಂಬರ ಜೋಡಣೆ ಸಹ ಕಡ್ಡಾಯವಾಗಿರುತ್ತದೆ.

e-KYC ಮಾಡಿಸಿಕೊಂಡ ಫಲಾನುಭವಿಗಳಿಗೆ ಮಾತ್ರ ಪಿ ಎಂ ಕಿಸಾನ್ ಯೋಜನೆಯ ಆರ್ಥಿಕ ನೆರವು ಮುಂದುವರೆಸಲಾಗುವುದೆಂದು ಸರ್ಕಾರ ತಿಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap