ವಿಶ್ವದ ಅತಿ ಎತ್ತರದ ಮೂರ್ತಿ ʼಏಕತಾ ಪ್ರತಿಮೆಗೆʼ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ಭಾರತ :

ಭಾರತದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ಗುಜರಾತ್‌ ನ ಸರ್ಧಾರ್‌ ಸರೋವರ್‌ ಡ್ಯಾಂ ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಏಕತೆಯ ಪ್ರತಿಮೆ ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.30.5 ಹೆಚ್ಚಳವಾಗಿದೆ.ಪ್ರಸ್ತುತ ಪ್ರತಿನಿತ್ಯ ಸರಾಸರಿ 12,369 ಪ್ರವಾಸಿಗರು ಪ್ರತಿಮೆ ವೀಕ್ಷಿಸಲು ಆಗಮಿಸುತ್ತಿದ್ದಾರೆ.

ಆರು ತಿಂಗಳಲ್ಲಿ ರಾಜ್ಯದ ಎಲ್ಲರಿಗೂ ಆಯುಷ್ಮಾನ್ ಕಾರ್ಡ್, ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಡ್ ವಿತರಿಸಿ – ಸಚಿವ ಸುಧಾಕರ್ ಸೂಚನೆ

ಇದು ಕೊರೋನಾ ಪೂರ್ವ ಅವಧಿಗಿಂತಲೂ ಹೆಚ್ಚು. ಆ ಅವಧಿಯಲ್ಲಿ ಪ್ರತಿನಿತ್ಯ 10,194 ರಷ್ಟು ಪ್ರವಾಸಿಗರು ಆಗಮಿಸುತಿದ್ದರು. ವಾರಾತ್ಯದ ದಿನಗಳಲ್ಲಿ ಪ್ರತಿಮೆ ಆವರಣ ಜನರಿಂದ ಗಿಜಿಗುಡುತ್ತಿರುತ್ತದೆ. ಆ ದಿನಗಳಲ್ಲಿ 18,187 ಜನರು ಆಗಮಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬ್ರೇಕಿಂಗ್ : ಪಕ್ಷದ ಪ್ರಮುಖರ ಜೊತೆ ಇಂದು ನಡೆಯಬೇಕಿದ್ದ ಅಮಿತ್ ಷಾ ಮೀಟಿಂಗ್ ದಿಢೀರ್ ರದ್ದು

ಅಕ್ಟೋಬರ್ 31, 2018 ರಂದು ತಮ್ಮ ತವರು ರಾಜ್ಯ ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಕತಾ ಪ್ರತಿಮೆಯನ್ನು ಉದ್ಘಾಟಿಸಿದರು. ಉದ್ಘಾಟನೆಯಾದಾಗಿನಿಂದ ಇಲ್ಲಿಯವರೆಗೆ 7.94 ಮಿಲಿಯನ್ ಜನರು ಏಕತೆಯ ಪ್ರತಿಮೆಗೆ ಭೇಟಿ ನೀಡಿದ್ದಾರೆ. ನವೆಂಬರ್ 2018 ರಿಂದ ಫೆಬ್ರವರಿ 2020 ರ ಅವಧಿಯಲ್ಲಿ ಟಿಕೆಟ್‌ಗಳನ್ನು ಮಾರಾಟ ಹಾಗೂ ಪಾರ್ಕಿಂಗ್ ಶುಲ್ಕಗಳಿಂದಲೇ ಸ್ಟ್ಯಾಚ್ಯೂ ಆಫ್ ಯೂನಿಟಿಗೆ ಬರೋಬ್ಬರಿ ₹ 116.31 ಕೋಟಿ ಆದಾಯ ಲಭಿಸಿದೆ ಎಂದು ಗುಜರಾತ್ ಸರ್ಕಾರ ಮಾಹಿತಿ ನೀಡಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap