ಕೊರಟಗೆರೆ : ಕೊರೋನಾ 3ನೇ ಅಲೆ ಕೊರಟಗೆರೆ ತಾಲೂಕಿನಲ್ಲಿ ಸತತ ಏರಿಕೆಯಿಂದ ಕಂಟಕಪ್ರಾಯವಾಗುತಿದ್ದು, ದಿನಂಪ್ರತಿ 25-30 ಸೋಂಕಿತರು ಕಂಡುಬರುತ್ತಿದ್ದು ಅದರಲ್ಲೂ ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಸೊಂಕು ಕಂಡುಬರುತ್ತಿದ್ದು,
ಆರೋಗ್ಯ ,ತಾ.ಪಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪ್ರೇಮರಿ ಹಾಗೂ ಸೆಕೆಂಡರಿ ಸೋಂಕಿತರನ್ನು ಪತ್ತೆಹಚ್ಚುವುದೇ ಹರಸಾಹಸ ಪಡುವಂತಾಗಿದೆ.
ಕೊರಟಗೆರೆ ತಾಲೂಕಿನಲ್ಲಿ ಕಳೆದ 1 ವಾರದಿಂದ ದಿನಂಪ್ರತಿ 25-30 ಸೋಂಕಿತರು ಕಂಡುಬರುತ್ತಿದ್ದು, ಮೂರನೇ ದಿನ 29,ನಂತರ 36 ತರುವಾಯ 22, ಮತ್ತೆ 19 ನೆನ್ನೆ 29 ಇಂದು 33 ಸೊಂಕಿತರು ಕಂಡು ಬಂದ್ದು, ಅದರಲ್ಲೂ ಶಾಲಾ ಕಾಲೇಜುಗಳಲ್ಲಿ ಹೆಚ್ಚು ಆಕ್ರಮಿಸಿದ್ದು,
ವಿದ್ಯಾರ್ಥಿಗಳ ಪತ್ತೆ ಕಾರ್ಯ ಒಂದುಕಡೆಯಾದರೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಸೋಂಕಿತರ ಸಂಪರ್ಕದಲ್ಲಿರುವ ಪ್ರೇಮರಿ ಹಾಗೂ ಸೆಕೆಂಡರಿ ಪತ್ತೆ ಕಾರ್ಯವೇ ಅಧಿಕಾರಿ ವರ್ಗಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕೊರೋನಾ ಮಹಾಮಾರಿ ಕೊರಟಗೆರೆ ತಾಲೂಕಿನಾದ್ಯಂತ ತನ್ನ ಕಬಂಧ ಬಾಹುವನ್ನ ಚಾಚುತ್ತಿದ್ದು, ಶಾಲಾ ವಿದ್ಯಾರ್ಥಿಗಳಲ್ಲಿ ಹೆಚ್ಚು ಸೋಂಕು ಕಂಡುಬರುತ್ತಿದ್ದು , ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ 22 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು, ಪಕ್ಕದ ಮೆಟ್ರಿಕ್, ಮೆಟ್ರಿಕ್ ಪೂರ್ವ, ಪ್ರೌಢಶಾಲೆ,ಪದವಿಪೂರ್ವ ,
ಪದವಿ ವಿದ್ಯಾರ್ಥಿನಿ ನಿಲಯದಲ್ಲಿ ಅಡುಗೆ ಸಿಬ್ಬಂದಿ ಸೇರಿದಂತೆ 18 ವಿದ್ಯಾರ್ಥಿಗಳಿಗೆ, ಕಾಳಿದಾಸ ಪ್ರೌಢಶಾಲೆಯ 6 ಜನ ವಿದ್ಯಾರ್ಥಿಗಳು ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಸೇರಿದಂತೆ 12 ಜನರಿಗೆ ಸೋಂಕು ಹರಡಿದ್ದು ಇದರಿಂದ ಈ ಬಾರಿಯ ಶೈಕ್ಷಣಿಕ ವರ್ಷವೂ ಏರುಪೇರಾಗುವ ದುಗುಡ ಹಾಗೂ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಪೆÇೀಷಕರಲ್ಲಿ ಕೊರೋನಾ ಭೀತಿ ಆತಂಕ ಕಾಡುತ್ತಿರುವುದು ಸಾಮಾನ್ಯವಾಗಿದೆ.
ಕೊರೋನಾ ಮಹಾಮಾರಿ ತಾಲೂಕಿನಲ್ಲಿ ರುದ್ರ ನರ್ತನ ನಡೆಸುತ್ತಿದ್ದು, 1ನೇ ಹಾಗೂ 2ನೇ ಅಲೆಗಿಂತಲ್ಲೂ 3ನೇ ಅಲೆ ಹೆಚ್ಚು ಸೋಂಕು ಹರಡುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವಲ್ಪ ಯಾಮಾರಿದರೂ ಮುಂದೆ ಇದೆ ಮಾರಿ ಹಬ್ಬ ಎಂಬುವ ವಾತಾವರಣವಿದ್ದು, ಪ್ರತಿಯೊಬ್ಬರು ಎಚ್ಚರವಹಿಸಿ ನಡೆಯುವ ಅನಿವಾರ್ಯ ಪರಿಸ್ಥಿತಿ ಒದಗಿದಂತ್ತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ