ಗುವಾಹಟಿ ಟೆಸ್ಟ್‌ ಸಮಯದಲ್ಲಿ ಬದಲಾವಣೆ….!

ಗುವಾಹಟಿ:

     ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಶನಿವಾರ ಅಸ್ಸಾಂನ ಗುವಾಹಟಿ ಯಲ್ಲಿ ಆರಂಭಗೊಳ್ಳಲಿದೆ. ಭಾರತದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳು ಬೆಳಿಗ್ಗೆ 9.30ಕ್ಕೆ ಆರಂಭವಾಗುವುದು ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ಗುವಾಹಟಿಯಲ್ಲಿ ಈ ಸಂಪ್ರದಾಯ ಬದಲಾಗಲಿದೆ. ನಿಗದಿತ ಸಮಯಕ್ಕೆ ಬದಲಾಗಿ ಅರ್ಧ ಗಂಟೆ ಮೊದಲೇ ಪಂದ್ಯ ಆರಂಭಗೊಳ್ಳಲಿದೆ. ಇದಕ್ಕೆ ಕಾರಣ ಈ ಪ್ರದೇಶದಲ್ಲಿ ಸೂರ್ಯಾಸ್ತವು ಬೇಗನೇ ಆಗುತ್ತದೆ. ಆದ್ದರಿಂದ ಟೆಸ್ಟ್ ಪಂದ್ಯದ ಸಮಯದಲ್ಲಿಯೂ ವ್ಯತ್ಯಾಸವಾಗಿದೆ.

    ಬೆಳಿಗ್ಗೆ 8.30ಕ್ಕೆ ಟಾಸ್ ಆಗಲಿದೆ. ಬೆಳಿಗ್ಗೆ 9ಕ್ಕೆ ಆಟ ಆರಂಭವಾಗುವುದು. ಇದರಿಂದಾಗಿ ಚಹಾ ಮತ್ತು ಭೋಜನ ವಿರಾಮವು ಅದಲು ಬದಲಾಗಿದೆ. ಬೆಳಿಗ್ಗೆ 11 ಗಂಟೆಗೆ ಚಹಾ ವಿರಾಮ ಇರಲಿದೆ. 11.20ರಿಂದ ಮಧ್ಯಾಹ್ನ 1.20ರವರೆಗೆ ಎರಡನೇ ಅವಧಿ ಆಟ ನಡೆಯುವುದು. 1.20ರಿಂದ 2 ಗಂಟೆಯವರೆಗೆ ಊಟದ ವಿರಾಮ. ನಂತರ ಸಂಜೆ 4ರವರೆಗೆ ಆಟ ನಡೆಯಲಿದೆ.

     ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ತಂಡವು ಸರಣಿಯಲ್ಲಿ ಈಗಾಗಲೇ 1–0 ಮುನ್ನಡೆಯಲ್ಲಿದೆ. 2010ರಲ್ಲಿ ಭಾರತದ ನೆಲದಲ್ಲಿ ಟೆಸ್ಟ್ ಸರಣಿಯನ್ನು 2–0ಯಿಂದ ಜಯಿಸಿತ್ತು. ಸರಣಿಯಲ್ಲಿ 1–1ರ ಸಮಬಲ ಸಾಧಿಸಲು ಆತಿಥೇಯ ತಂಡಕ್ಕೂ ಈ ಟೆಸ್ಟ್‌ನಲ್ಲಿ ಜಯ ದಾಖಲಿಸಲೇಬೇಕಿದೆ.

     ಕುತ್ತಿಗೆ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಶುಭಮನ್‌ ಗಿಲ್ ಆಡದಿದ್ದರೆ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ತಂಡವನ್ನು ಮುನ್ನಡೆಸುವರು. ಮೂರನೇ ಕ್ರಮಾಂಕದ ಬ್ಯಾಟರ್ ಆಗಿ ಸಾಯಿ ಸುದರ್ಶನ್ ಅಥವಾ ಕನ್ನಡಿಗ ದೇವದತ್ತ ಪಡಿಕ್ಕಲ್ ಅವರು ಸ್ಥಾನ ಪಡೆಯುವ ಸಾಧ್ಯತೆ ಇದೆ. 

   ವರದಿಯ ಪ್ರಕಾರ, ಸರಣಿಯ ಆರಂಭಿಕ ಪಂದ್ಯಕ್ಕಾಗಿ ಈಡನ್ ಗಾರ್ಡನ್ಸ್‌ನಲ್ಲಿ ಮಾಡಲಾಗಿದ್ದ ಪಿಚ್‌ಗಿಂತ ಸಂಪೂರ್ಣವಾಗಿ ಈ ಪಿಚ್‌ ಭಿನ್ನವಾಗಿರಲಿದ್ದು ವೇಗಿಗಳಿಗೆ ನೆರವಾಗುವ ಉತ್ತಮ ಬೌನ್ಸ್ ಮತ್ತು ಕ್ಯಾರಿ ನಿರೀಕ್ಷಿಸಲಾಗಿದೆ. ಪಿಚ್‌ ತಿರುವು ಪಡೆಯುವ ನಿರೀಕ್ಷೆಯಿಲ್ಲ.

   “ಇಲ್ಲಿನ ಪಿಚ್ ಕೆಂಪು ಮಣ್ಣಿನಿಂದ ಮಾಡಲ್ಪಟ್ಟಿದೆ, ಇದು ಹೆಚ್ಚು ವೇಗ ಮತ್ತು ಬೌನ್ಸ್ ನೀಡುವ ಪ್ರವೃತ್ತಿಯನ್ನು ಹೊಂದಿದೆ. ತವರು ಋತುವಿಗೆ ಮುಂಚಿತವಾಗಿಯೇ ಭಾರತ ತಂಡವು ತಮ್ಮ ಬೇಡಿಕೆಗಳನ್ನು ಸ್ಪಷ್ಟಪಡಿಸಿತ್ತು. ಗಣನೀಯವಾಗಿ ಬದಲಾಗುವ ಬೌನ್ಸ್ ಆಗದಂತೆ ಖಚಿತಪಡಿಸಿಕೊಳ್ಳಲು ಕ್ಯುರೇಟರ್‌ಗಳು ಪ್ರಯತ್ನಿಸುತ್ತಿದ್ದಾರೆ” ಎಂದು ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದೆ.

Recent Articles

spot_img

Related Stories

Share via
Copy link