ಕ್ವಾಲಾಲಂಪುರ:
ಬೇಯುಮಾಸ್ ಓವಲ್ ಮೈದಾನದಲ್ಲಿ ನಡೆದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ.
ಇಂದು ನಡೆದ 16ನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು. ಭಾರತೀಯ ಬೌಲರ್ಗಳ ದಾಳಿಯಿಂದಾಗಿ 14.3 ಓವರ್ಗಳಲ್ಲಿ ಮಲೇಷ್ಯಾ ತಂಡವು ಕೇವಲ 31 ರನ್ಗಳಿಸಿ ಆಲೌಟ್ ಆಯಿತು.
32 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡವು 2.5 ಓವರ್ಗಳಲ್ಲಿ 32 ರನ್ ಕಲೆಹಾಕಿ 10 ವಿಕೆಟ್ಗಳ ಅಮೋಘ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸಿ ಗುಂಪಿನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಗಳಿಸಿರುವ ಭಾರತ ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾ ಅಷ್ಟೇ ಅಂಕಗಳನ್ನು ಗಳಿಸಿದ್ದರೂ ಭಾರತ ಉತ್ತಮ ರನ್‌ರೇಟ್ ( + 9.148) ಕಾಯ್ದುಕೊಂಡಿದೆ. ಮಂದಿನ ಪಂದ್ಯ ಜನವರಿ 23ರಂದು ನಡೆಯಲಿದ್ದು ಶ್ರೀಲಂಕ ತಂಡವನ್ನು ಎದುರಿಸಲಿದೆ.