ಬಸ್ ಡಿಕ್ಕಿ : ದಸರಾ ಆನೆ ಸಾವು!!!

0
406

ಹುಣಸೂರು: 

      ನಾಗರಹೊಳೆಯ ಮತ್ತಿಗೋಡು ಅರಣ್ಯದ ಬಳಿ ಕೇರಳದಿಂದ ಮೈಸೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದು ಚಿಕಿತ್ಸೆ ಫಲಕಾರಿಯಾಗದೆ ಆನೆ ಇಂದು ಸೋಮವಾರ (ಅಕ್ಟೋಬರ್.08) ಬೆಳಗ್ಗೆ ಸಾವನ್ನಪ್ಪಿದೆ.

      ಕೇರಳದ ಕಣ್ಣಾನೂರಿನಿಂದ ಬೆಂಗಳೂರಿಗೆ ಸೋಮವಾರ ಮುಂಜಾನೆ ತೆರಳುತ್ತಿದ್ದ ಕಲ್ಪಕ ಎಂಬ ಬಸ್‍ ಡಿಕ್ಕಿ ಹೊಡೆದಿದೆ. ಮೃತಪಟ್ಟ ಆನೆ ಅರಣ್ಯ ಇಲಾಖೆಯ ಆನೆ ಕ್ಯಾಂಪ್ ಗೆ ಸೇರಿದ್ದಾಗಿದೆ. ಆನೆಯನ್ನು ಕಾಡಿನಲ್ಲಿ ಮೇಯಲು ಬಿಡಲಾಗಿತ್ತು. ಮತ್ತಿಕಾಡು ಆನೆ ಕ್ಯಾಂಪ್‍ನ ಮುಖ್ಯರಸ್ತೆಯಲ್ಲಿ ಮುಂಜಾನೆ 2 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದೆ.

      ಪೊನ್ನಂಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬಸ್​ ಚಾಲಕನ ವಿಚಾರಣೆ ನಡೆಸುತ್ತಿದ್ದಾರೆ.

      ದಸರಾ ಅಂತಿಮ ಪಟ್ಟಿಯಲ್ಲಿ ರಂಗನ ಹೆಸರಿತ್ತು. ಮೂರು ವರ್ಷದ ಹಿಂದೆ ಬನ್ನೇರುಘಟ್ಟ ಬಳಿ ಸೆರೆಹಿಡಿದು ಈ ಆನೆಯನ್ನು ಪಳಗಿಸಲಾಗಿತ್ತು. ಕೆಲವೇ ದಿನಗಳಲ್ಲಿ ಮೈಸೂರು ದಸರಾದಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸಲು ತೆರಳಬೇಕಿದ್ದ ಆನೆ ಈಗ ಮೃತಪಟ್ಟಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here