2030ರ ಕಾಮನ್‌ವೆಲ್ತ್ ಗೇಮ್ಸ್‌ ಆತಿಥ್ಯ : ಅಧಿಕೃತ ಬಿಡ್‌ ಸಲ್ಲಿಸಿದ ಭಾರತ

ಲಂಡನ್‌:

     2030ರ ಕಾಮನ್ವೆಲ್ತ್‌  ಕ್ರೀಡೆಗಳ ಆತಿಥ್ಯದ ವಹಿಸಲು ಭಾರತ ಅಧಿಕೃವಾಗಿ ಬಿಡ್‌ ಸಲ್ಲಿಸಿದೆ. ಇದನ್ನು ಗುಜರಾತ್ ಸರ್ಕಾರದ ಕ್ರೀಡಾ ಸಚಿವ ಹರ್ಷ್ ಸಾಂಘವಿ ಖಚಿತಪಡಿಸಿದ್ದಾರೆ. ಭಾರತೀಯ ಕಾಮನ್‌ವೆಲ್ತ್‌ ಗೇಮ್ಸ್‌ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗುಜರಾತ್‌ನ ಕ್ರೀಡಾ ಸಚಿವ ಹರ್ಷ್‌ ಸಾಂಘವಿ ಅವರು ಲಂಡನ್‌ನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಫಡರೇಶನ್‌ಗೆ ಬಿಡ್‌ ಸಲ್ಲಿಕೆ ಮಾಡಿದರು. ಕ್ರೀಡಾಕೂಟವನ್ನು ಅಹಮದಾಬಾದ್‌ನಲ್ಲಿ ಆಯೋಜಿಸಲು ಭಾರತ ಉದ್ದೇಶಿಸಿದ್ದು, ಆತಿಥ್ಯ ಹಕ್ಕು ಸಿಗುವುದು ಬಹುತೇಖ ಖಚಿತವಾಗಿದೆ.

    ಕಾಮನ್‌ವೆಲ್ತ್ ಸ್ಪೋರ್ಟ್‌ಗೆ ಪ್ರಸ್ತಾವನೆಯನ್ನು ಸಲ್ಲಿಸಿದ ನಂತರ ಲಂಡನ್‌ನಲ್ಲಿ ಮಾತನಾಡಿದ ಸಾಂಘವಿ, ಬಿಡ್ ಮೂರು ಪ್ರಮುಖ ಸ್ತಂಭಗಳ ಮೇಲೆ ನಿಂತಿದೆ – ಸುಸ್ಥಿರತೆ, ಒಳಗೊಳ್ಳುವಿಕೆ ಮತ್ತು ಪರಂಪರೆ. ಗುಜರಾತ್‌ನ ಅಮ್ದವಾಡ (ಅಹಮದಾಬಾದ್) ಅನ್ನು ಆತಿಥೇಯ ನಗರವಾಗಿ ಆಯ್ಕೆ ಮಾಡುವುದು ನಮ್ಮ ಪ್ರಸ್ತಾವನೆಯಾಗಿದೆ. ಏಕೆಂದರೆ ಇದು ಎಲ್ಲಾ ಸ್ಪರ್ಧಾತ್ಮಕ ಮೌಲ್ಯಗಳು, ವ್ಯಾಪಾರ ಸೌಲಭ್ಯಗಳು ಮತ್ತು ವಸತಿ ಸೌಕರ್ಯಗಳೊಂದಿಗೆ ಸಾಂದ್ರೀಕೃತ ಆಟಗಳ ಹೆಜ್ಜೆಗುರುತನ್ನು ನೀಡುತ್ತದೆ” ಎಂದು ಸಂಘವಿ ಹೇಳಿದರು.

   ಇತ್ತೀಚೆಗಷ್ಟೇ ಭಾರತ ಸಲ್ಲಿಸಿರುವ ಬಿಡ್‌ಅನ್ನು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ವಿಶೇಷ ಮಹಾಸಭೆಯಲ್ಲಿ ಅನುಮೋದಿಸಿತ್ತು. ಅಹಮದಾಬಾದ್ ಜೊತೆಗೆ 2010ರಲ್ಲಿ ಆತಿಥ್ಯ ವಹಿಸಿದ್ದ ದೆಹಲಿ ಮತ್ತು ಭುವನೇಶ್ವರ ನಗರಗಳನ್ನೂ ಆತಿಥ್ಯಕ್ಕೆ ಪರಿಗಣಿಸಲಾಗಿದೆ. 2030ರ ಆತಿಥ್ಯಕ್ಕೆ ಆಸಕ್ತಿ ತೋರಿದ್ದ ಕೆನಡಾ ಹಿಂದೆ ಸರಿದಿದೆ. ಹೀಗಾಗಿ ಭಾರತಕ್ಕೆ ಆತಿಥ್ಯ ದೊರೆಯುವ ಅವಕಾಶ ಸಾಧ್ಯತೆ ಹೆಚ್ಚಾಗಿದೆ.

   ಈಗಿನ ಸ್ಥಿತಿಯಲ್ಲಿ ಕಾಮನ್‌ವೆಲ್ತ್ ಆತಿಥ್ಯ ಭಾರತಕ್ಕೆ ಸಿಕ್ಕುವುದು ಕಷ್ಟವೇನಲ್ಲ ಎಂದು ಊಹಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರೀ ವೆಚ್ಚದ ಕಾಮನ್‌ವೆಲ್ತ್ ಗೇಮ್ಸ್‌ ಸಂಘಟನೆ ಯಾರಿಗೂ ಬೇಡವಾಗಿದೆ. ಮುಂದಿನ ವರ್ಷದ ಗೇಮ್ಸ್‌ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಬೇಕಿದ್ದರೂ, ಅದು ಇದ್ದಕ್ಕಿದಂತೆ ತನ್ನಿಂದ ಸಾಧ್ಯವಿಲ್ಲ ಎಂದು ಹೇಳಿದೆ. ಆದ್ದರಿಂದ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಕ್ರೀಡಾಕೂಡ ನಡೆಯಲಿದೆ. 

    ಕಾಮನ್‌ವೆಲ್ತ್ ಕ್ರೀಡಾಕೂಟದ ಬಿಡ್‌ ಮಾಡಿರುವುದು ಒಲಿಂಪಿಕ್ಸ್‌ ಪೂರ್ವಸಿದ್ಧತೆ ಮಾಡಲು ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ ಕೂಡ ಜಾರಿಗೆ ಬಂದಿದೆ. ಈ ಎಲ್ಲ ಬೆಳವಣಿಗೆ ನೋಡುವಾಗ ಕಾಮನ್‌ವೆಲ್ತ್ ಮತ್ತು ಒಲಿಂಪಿಕ್ ಭಾರತದಲ್ಲಿ ನಡೆಯುವುದು ಖಚಿತವಾದಂತಿದೆ.

Recent Articles

spot_img

Related Stories

Share via
Copy link