INDIA ಸಭೆ : ಜೂ1ಕ್ಕೆ ಯಾರು present, ಯಾರು absent …..?

ನವದೆಹಲಿ :

    ಜೂನ್ 1 ರಂದು ನಡೆಯಲಿರುವ ಇಂಡಿಯಾ ಬ್ಲಾಕ್ ಸಭೆಗೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಜರಾಗುವುದಿಲ್ಲ. ಚಂಡಮಾರುತ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯ ಹಾಗೂ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದ ಕಾರಣ ಮಮತಾ ಈ ಸಭೆಯಲ್ಲಿ ಭಾಗವಹಿಸುತ್ತಿಲ್ಲ.

    ಸಭೆಗೆ ನಾನು ಹೋಗದಿದ್ದರೂ ನನ್ನ ಮನಸ್ಸು ಅಲ್ಲೆ ಇರುತ್ತದೆ ಎಂದು ಹೇಳಿದ್ದಾರೆ. ಇನ್ನು ಲೋಕಸಭೆ ಚುನಾವಣೆಗೆ ಕೊನೆಯ ಹಂತದ ಮತದಾನ ಜೂನ್ 1ರಂದು ನಡೆಯಲಿದ್ದು ಅದೇ ದಿನ, ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. 

    ಕೋಲ್ಕತ್ತಾ ದಕ್ಷಿಣ ಮತ್ತು ಕೋಲ್ಕತ್ತಾ ಉತ್ತರ ಸೇರಿದಂತೆ ಒಂಬತ್ತು ಕ್ಷೇತ್ರಗಳಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ. ಜಾದವ್‌ಪುರ, ದುಮ್ಡಮ್, ಬರಾಸತ್, ಬಸಿರ್‌ಹತ್, ಜಯನಗರ, ಮಥುರಾಪುರ ಮತ್ತು ಡೈಮಂಡ್ ಹಾರ್ಬರ್ ನಲ್ಲಿ ಮತದಾನ ನಡೆಯಲಿವೆ. 

   ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಟಿಎಂಸಿ ಪಕ್ಷವು ತನ್ನ ತವರು ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಇತರ ಯಾವುದೇ ಇಂಡಿಯಾ ಬ್ಲಾಕ್ ಪಕ್ಷದೊಂದಿಗೆ ಸೀಟು ಹಂಚಿಕೆ ಒಪ್ಪಂದವನ್ನು ಹೊಂದಿಲ್ಲ. ಆದರೆ ಉತ್ತರ ಪ್ರದೇಶದ ಭದೋಹಿಯಲ್ಲಿ ಟಿಎಂಸಿ ಅಭ್ಯರ್ಥಿ ಲಲಿತೇಶಪತಿ ತ್ರಿಪಾಠಿ ಅವರನ್ನು ಮಿತ್ರ ಪಕ್ಷ ಸಮಾಜವಾದಿ ಪಕ್ಷವು ಬೆಂಬಲಿಸಿದೆ. 28 ವಿರೋಧ ಪಕ್ಷಗಳು ಒಟ್ಟಾಗಿ ಇಂಡಿಯಾ ಕೂಟವನ್ನು ರಚಿಸಿವೆ. ಆದಾಗ್ಯೂ, ನಿತೀಶ್ ಕುಮಾರ್ ಅವರ ಜನತಾ ದಳ  ಮತ್ತು ರಾಷ್ಟ್ರೀಯ ಲೋಕದಳ ನಂತಹ ಕೆಲವು ಪಕ್ಷಗಳು ನಂತರ ಎನ್ಡಿಎಗೆ ಸೇರ್ಪಡೆಗೊಂಡವು.
    ಇಂಡಿಯಾ ಮೈತ್ರಿಕೂಟದ ಎಲ್ಲಾ ಸಭೆ ಮತ್ತು ರ್ಯಾಲಿಗಳಲ್ಲಿ ಟಿಎಂಸಿ ಭಾಗವಹಿಸಿತ್ತು. ಮಾರ್ಚ್ 31ರಂದು ದೆಹಲಿಯಲ್ಲಿ ನಡೆದ ರ್ಯಾಲಿಯಲ್ಲಿ, ಟಿಎಂಸಿ ನಾಯಕ ಡೆರೆಕ್ ಒ’ಬ್ರೇನ್ ಅವರು ಇಂಡಿಯಾ ಬ್ಲಾಕ್‌ನ ಭಾಗವಾಗಿ ಉಳಿಯುವುದಾಗಿ ಘೋಷಿಸಿದ್ದರು. ಕಳೆದ ವರ್ಷ ಜೂನ್ 23ರಂದು ಪಾಟ್ನಾದಲ್ಲಿ ಇಂಡಿ ಮೈತ್ರಿ ಬ್ಲಾಕ್‌ನ ಮೊದಲ ಸಭೆ ನಡೆದಿತ್ತು. ಇದರ ನಂತರ, 2023ರ ಜುಲೈ 17-18ರಂದು ಬೆಂಗಳೂರಿನಲ್ಲಿ ಮತ್ತು ನಂತರ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರ ನಡುವೆ ಮುಂಬೈನಲ್ಲಿ ಸಭೆ ನಡೆಯಿತು. ಇಲ್ಲಿಯೇ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಿ ಲೋಕಸಭೆ ಚುನಾವಣೆ ಎದುರಿಸಲು ಸಂಕಲ್ಪ ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap