ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ನೆರವಿಗಾಗಿ ಭಾರತೀಯ ಮೂಲದ ಗಾಯಕಿ ಕಾರ್ಯಕ್ರಮದಲ್ಲಿ ನೋಟುಗಳ ಸುರಿಮಳೆ ಆಗಿದ್ದು, 2.25 ಕೋಟಿ ರೂ. ಸಂಗ್ರಹವಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮೆರಿಕದ ಅಟ್ಲಾಂಟಾ ಮತ್ತು ಜಾರ್ಜಿಯಾದಲ್ಲಿ ಗುಜರಾತ್ ಮೂಲದ ಗಾಯಕಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಅಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಹಣದ ಹರಿವು ಹರಿಸಿದ್ದಾರೆ.ಈ ಮೂಲಕ ಉಕ್ರೇನಿಯರ ನೆರವಿಗೆ ಸಹಾಯಹಸ್ತ ಚಾಚಿದ್ದಾರೆ.
ಸಂತೋಷ್ ಕೆ ಪಾಟೀಲ್ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇವೆ : ಕೆ ಎಸ್ ಈಶ್ವರಪ್ಪ
ಗೀತಾ ಬೆನ್ ರಾಬರಿ ಲೋಕ್ ದರಿಯೊ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಅನಿವಾಸಿ ಭಾರತೀಯರು ನೋಟು ಚೆಲ್ಲಿದ್ದಾರೆ. ವೇದಿಕೆ ಮೇಲೆ ಬಿದ್ದ ನೋಟುಗಳ ಫೋಟೊ ಇದೀಗ ವೈರಲ್ ಆಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
