ಋಣ ವಿಮೋಚನಾ ಕಾಯ್ದೆಯನ್ನು ಅಂಗೀಕರಿಸದೆ ಹಿಂತಿರುಗಿಸಿದ ರಾಷ್ಟ್ರಪತಿಗಳು..!!

ಬೆಂಗಳೂರು

        ಮೀಟರ್ ಬಡ್ಡಿ ಧಂದೆಕೋರರಿಗೆ ಕಡಿವಾಣ ಹಾಕುವ ಹಾಗೂ ಅವರಿಂದ ಜನಸಾಮಾನ್ಯರು ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ರಾಜ್ಯ ಸರ್ಕಾರದ ಮಹತ್ವದ ಋಣ ವಿಮೋಚನಾ ಕಾಯ್ದೆಯನ್ನು ಅಂಗೀಕರಿಸದೆ ರಾಷ್ಟ್ರಪತಿಗಳು ಹಿಂತಿರುಗಿಸಿದ್ದಾರೆ.
ಋಣ ವಿಮೋಚನಾ ಕಾಯ್ದೆಯ ಹಲವು ವಿಷಯಗಳ ಕುರಿತು ಸ್ಪಷ್ಟೀಕರಣ ಕೋರಿ ರಾಷ್ಟ್ರಪತಿಗಳು ಸದರಿ ಕಾಯ್ದೆಯ ಕಡತವನ್ನು ಹಿಂದಕ್ಕೆ ಕಳಿಸಿದ್ದು ಇದರಿಂದಾಗಿ ಉದ್ದೇಶಿತ ಕಾಯ್ದೆ ಜಾರಿಗೆ ಬರಲು ಮತ್ತಷ್ಟು ವಿಳಂಬವಾಗಲಿದೆ.

        ರಾಜ್ಯಾದ್ಯಂತ ಜನಸಾಮಾನ್ಯರಿಗೆ ಮೀಟರ್ ಬಡ್ಡಿಯ ಆಧಾರದ ಮೇಲೆ ಸಾಲ ನೀಡಿ ವಿಪರೀತ ಬಡ್ಡಿ ಸುಲಿಗೆ ಮಾಡುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡಿದ್ದ ಸರ್ಕಾರ ಇಂತಹ ಮೀಟರ್ ಬಡ್ಡಿ ಧಂದೆಕೋರರಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಋಣ ವಿಮೋಚನಾ ಕಾಯ್ದೆಯನ್ನು ಜಾರಿಗೆ ತಂದಿತ್ತು.

        ಹೀಗೆ ಜಾರಿಗೆ ತಂದ ಕಾಯ್ದೆಗೆ ವಿಧಾನಮಂಡಲದ ಉಭಯ ಸದನಗಳು ಅಂಗೀಕಾರ ನೀಡಿದ್ದವು.ಆನಂತರ ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳಿಸಿಕೊಡಲಾಗಿತ್ತಾದರೂ ಇದೀಗ ರಾಷ್ಟ್ರಪತಿಗಳು ಅದಕ್ಕೆ ಅಂಕಿತ ಹಾಕದೆ ಹಿಂತಿರುಗಿಸಿದ್ದಾರೆ.

         ಕಾಯ್ದೆಯಲ್ಲಿ ಕೆಲವು ಅಂಶಗಳು ಸ್ಪಷ್ಟವಾಗಿಲ್ಲ.ಹೀಗಾಗಿ ಕಾಯ್ದೆಗಳಲ್ಲಿನ ನಿರ್ದಿಷ್ಟ ಕಲಂಗಳ ಕುರಿತು ಸ್ಪಷ್ಟೀಕರಣ ನೀಡುವಂತೆ ರಾಷ್ಟ್ರಪತಿಗಳು ಹೇಳಿದ್ದು,ಈ ಹಿನ್ನೆಲೆಯಲ್ಲಿ ಸದರಿ ಕಾಯ್ದೆಯ ಕುರಿತು ಪುನ: ಸರ್ಕಾರ ಸರ್ಕಸ್ಸು ನಡೆಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ.
ದೇವರಾಜ ಅರಸರ ನಂತರ ಋಣ ವಿಮೋಚನಾ ಕಾಯ್ದೆಯನ್ನು ಜಾರಿಗೊಳಿಸಲು ಕುಮಾರಸ್ವಾಮಿ ಅವರ ಸರ್ಕಾರ ಮುಂದಾಗಿದ್ದುದು ವ್ಯಾಪಕ ಕುತೂಹಲಕ್ಕೆ ಕಾರಣವಾಗಿತ್ತು.ಆದರೆ ಇದೀಗ ರಾಷ್ಟ್ರಪತಿಗಳು ಅದಕ್ಕೆ ಇನ್ನೂ ಅಂಕಿತ ಹಾಕದೆ ಇರುವುದರಿಂದ ಮೀಟರ್ ಬಡ್ಡಿ ಧಂದೆಕೋರರ ಜಾಲಕ್ಕೆ ಸಿಲುಕಿದ ಬಡ ಜನ ಕಾಯ್ದೆಯ ಲಾಭ ಪಡೆಯಲು ಮತ್ತಷ್ಟು ದಿನಗಳ ಕಾಲ ಕಾಯಬೇಕಾಗಿ ಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap