ಇಂಡಿಯನ್ ಪೊಲೀಸ್ ಪೋರ್ಸ್ ಚಿತ್ರ ದೀಪಾವಳಿ ವೇಳೆಗೆ ತೆರೆಗೆ : ವಿವೇಕ್ ಒಬೆರಾಯ್

ಬೆಂಗಳೂರು

    ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮುಂದಿನ ಚಿತ್ರ ಇಂಡಿಯನ್ ಪೊಲೀಸ್ ಪೋರ್ಸ್ ದೀಪಾವಳಿಗೆ ತೆರೆ ಮೇಲೆ ಬರಲಿದೆ.

    ಈ ಕುರಿತು ಸ್ವತಃ ವಿವೇಕ್ ಒಬೆರಾಯ್ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊಂಡರು. ಇಂಡಿಯನ್ ಪೊಲೀಸ್ ಕನ್ನಡಿಗ ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಹೊರ ಬರಲಿದ್ದು, ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಕರ್ನಾಟಕದ [ದಿ.ಜೀವರಾಜ್ ಆಳ್ವ] ಅಳಿಯ ವಿವೇಕ್ ಒಬೆರಾಯ್ ನಟರಾಗಿದ್ದು, ನಾಯಕಿ ಶಿಲ್ಪಾ ಶೆಟ್ಟಿ ಕೂಡ ಕರಾವಳಿ ಮೂಲದವರು ಎಂಬುದು ವಿಶೇಷ.

    ಮೂಲತಃ ಮಂಗಳೂರಿನ ಫೈಟರ್ ಶೆಟ್ಟಿ ಚನ್ನೈ ಎಕ್ಸ್ ಪ್ರೆಸ್, ಸಿಂಗಂ, ಸಿಂಗಂ ರಿಟರ್ನ್ಸ್  ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.ಚಿತ್ರನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಪ್ರತಿಭಾವಂತ ನಟಿ ನಟಿಯರ ತಾರಾ ಬಳಗವಿದ್ದು, ಅಮೆಜಾನ್ ಪ್ರೈ ಮ್ ನ ಚಿತ್ರ ಇದಾಗಿದೆ. ದೀಪಾವಳಿಗೆ ಚಿತ್ರ ತೆರೆಯ ಮೇಲೆ ಬರಲಿದ್ದು, ಬಹುದೊಡ್ಡ ಯಶಸ್ಸು ದೊರೆಯುವ ನಿರೀಕ್ಷೆಯಿದೆ ಎಂದು ವಿವೇಕ್ ಒಬೆರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link