ಸಿಬ್ಬಂದಿ ವೇತನ ಬಾಕಿ ಸ್ಥಗಿತಗೊಂಡಿದ್ದ ಇಂದಿರಾ ಕ್ಯಾಂಟಿನ್‍ಗಳು

ತುಮಕೂರು

     ಬಡ ಜನರು ಹಾಗೂ ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುತ್ತಿದ್ದ ತುಮಕೂರು ನಗರದಲ್ಲಿರುವ ನಾಲ್ಕು ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳು ವೇತನ ಬಾಕಿ ವಿರೋಧಿಸಿ ಮಂಗಳವಾರ ಮಧ್ಯಾಹ್ನವರೆಗೂ ಸೇವೆ ಸ್ಥಗಿತಗೊಳಿಸಿದ್ದರಿಂದ ಸಾರ್ವಜನಿಕರು ಪರದಾಡಿದ ಪ್ರಸಂಗ ನಡೆಯಿತು.

    ಹಸಿವಿನಿಂದ ಇಂದಿರಾ ಕ್ಯಾಂಟಿನ್‍ಗೆ ಬಂದ ಜನರು ಊಟ ಸಿಗದೆ ಸಪ್ಪೆ ಮುಖದೊಂದಿಗೆ ವಾಪಸ್ ಮರಳಿದರೆ, ಸಿಬ್ಬಂದಿಗಳು ಮಾತ್ರ ಕಳೆದ ಎಂಟು ತಿಂಗಳಿಂದ ಸಂಬಳ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ವ್ಯತದ ಪರಿಣಾಮ ಇಂದಿರಾ ಕ್ಯಾಂಟಿನ್ ಸ್ಥಗಿತಗೊಳಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ ನೋಡಿ.

    ತುಮಕೂರು ನಗರದ ನಾಲ್ಕು ಇಂದಿರಾ ಕ್ಯಾಂಟಿನ್ ಗಳು ಇಂದು ಏಕಾಏಕಿ ಕಾರ್ಯಸ್ಥಗಿತಗೊಳಿಸಿವೆ. ಕಾಂಗ್ರೆಸ್ ಸರ್ಕಾರದ ಬಹುಜನಪ್ರಿಯ ಯೋಜನೆ ತುಮಕೂರನಲ್ಲಿ ಸ್ಥಗಿತಗೊಳಲು ಕಾರಣ ಇಂದಿರಾ
ಕ್ಯಾಂಟಿನ್ ನ ಸಿಬ್ಬಂದಿಗಳ ಸಂಬಳ ಸಮಸ್ಯೆ.

    ಹೌದು ತುಮಕೂರು ನಗರದ ನಾಲ್ಕು ಇಂದಿರಾ ಕ್ಯಾಂಟಿನ್ ಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಸಿಬ್ಬಂದಿಗಳು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಕಳೆದ 8 ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ, ಹೀಗಾಗಿ ಇಂದು ಬೆಳಗ್ಗೆ ಸಿದ್ದಪಡಿಸಿದ ರೈಸ್ ಬಾತ್, ಇಡ್ಲಿ, ಚಟ್ನಿ ಎಲ್ಲಾವನ್ನು ಅಡುಗೆ ಮನೆಯಲ್ಲಿ ಉಳಿಸಿ, ಸಿಬ್ಬಂದಿಗಳು ಕೆಲಸವನ್ನು ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap