ಫೆ.1ರಿಂದ ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್‌ ಯಾನ ಆರಂಭ

ಹೊಸಪೇಟೆ:

   ವಿಶ್ವ ವಿಖ್ಯಾತ ಹಂಪಿ ಉತ್ಸವ ಫೆಬ್ರವರಿ 2 ರಿಂದ 3 ದಿನಗಳ ಕಾಲ ನಡೆಯಲಿದ್ದು, ಉತ್ಸವ ಆರಂಭಕ್ಕೂ ಮುನ್ನಾ ದಿನ ಫೆ.1ರಂದು ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್‌ ಯಾನ ಆರಂಭವಾಗಲಿದೆ.

   ಫೆಬ್ರವರಿ 1 ರಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್‌ ಯಾನಕ್ಕೆ ಚಾಲನೆ ನೀಡಲಿದ್ದಾರೆ. ಈ ಹೆಲಿಕಾಪ್ಟರ್‌ ಯಾನ ವಿಶ್ವ ಪಾರಂಪರಿಕ ತಾಣವನ್ನು ಆಗಸದಿಂದ ಉತ್ತಮವಾಗಿ ನೋಡಲು ಅವಕಾಶ ಕಲ್ಪಿಸುತ್ತದೆ ಎಂದು ವಿಜಯನಗರ ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ.

   ಈ ಹಿಂದೆ ಹೆಲಿಕಾಪ್ಟರ್ ಯಾನವನ್ನು ಉತ್ಸವ ದಿನದಂದೇ ಆರಂಭಿಸಲಾಗುತ್ತಿತ್ತು. ಆದರೆ, ಹಲವು ಪ್ರವಾಸಿಕರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ಹೀಗಾಗಿ ಹಿಂದಿ ದಿನವೇ ಆರಂಭಿಸಲಾಗುತ್ತಿದೆ. ಅಲ್ಲದೆ, ಹೆಲಿಕಾಪ್ಟರ್ ಯಾನದ ಅವಧಿಯನ್ನೂ ಕೂಡ 6 ನಿಮಿಷಗಳಿಂದ 8 ನಿಮಿಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

   ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ‘ಹಂಪಿ ಬೈ ಸ್ಕೈ ಹಂಪಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ಕಮಲಾಪುರದ ಹೋಟೆಲ್‌ ಮಯೂರ ಭುವನೇಶ್ವರಿ ಆವರಣದಿಂದ ಬೆಳಿಗ್ಗೆ 10ಕ್ಕೆ ಹಂಪಿ ಬೈ ಸ್ಕೈ ಹೆಲಿಕಾಪ್ಟರ್ ಯಾನ ಆರಂಭವಾಗಲಿದೆ. ಜನರನ್ನು ಏಳು ನಿಮಿಷ ಆಗಸದಲ್ಲಿ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಿ ವಾಪಸ್‌ ಕರೆತರಲಾಗುವುದು.

   ಮೂರೂ ದಿನ ಈ ವ್ಯವಸ್ಥೆ ಇರಲಿದೆ. ಹಂಪಿಯ ವೈಮಾನಿಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಹಾಗೂ ಆಸಕ್ತರಿಗೆ ಅವಕಾಶ ಲಭಿಸಲಿದೆ. ಎಂಟು ನಿಮಿಷಗಳ ಯಾನಕ್ಕೆ 4,299 ರೂ. ಮತ್ತು ಏಳು ನಿಮಿಷಕ್ಕೆ 3,700 ರೂ. ಎರಡು ವರ್ಷದೊಳಗಿನ ಮಕ್ಕಳಿಗೆ ಉಚಿತವಿರಲಿದೆ. ಯಾನಕ್ಕೆ ಬರುವ ಪ್ರವಾಸಿಗರು ಯಾವುದಾದರೂ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಮಾಹಿತಿ ನೀಡಿದ್ದಾರೆ.

   ಈ ವರ್ಷ ಪ್ರವಾಸಿಗರ ಸುರಕ್ಷತೆಗಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದೆ. ಪುಸ್ತಕ ಮತ್ತು ಹೂವು, ವೇದಿಕೆ ಕಾರ್ಯಕ್ರಮಗಳು ಮತ್ತು ಇತರೆ ಪ್ರದರ್ಶನಗಳು ಈ ವರ್ಷ ಉತ್ಸವದ ಭಾಗವಾಗಿರುತ್ತವೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap