ಸಂತೋಷ್‌ ಆತ್ಮಹತ್ಯೆ ಪ್ರಕರಣ ಗಂಭೀರವಾಗ್ತಿದ್ದಂತೆ ʼಮೋದಿʼ ಎಂಟ್ರಿ, ಬಿ.ಎಲ್‌ ಸಂತೋಷ್‌ಗೆ ಬುಲಾವ್, ಕೇಸ್‌ ಕುರಿತು ಮಾಹಿತಿ

ನವದೆಹಲಿ :

ಗುತ್ತೆದಾರ ಸಂತೋಷ್‌ ಅತ್ಮಹತ್ಯೆ ಪ್ರಕರಣವನ್ನ ಪ್ರಧಾನಿ ಮೋದಿ ಗಂಭೀರವಾಗಿ ಪರಿಗಣಿಸಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಬಳಿ ಮಾಹಿತಿ ಪಡೆಯುತ್ತಿದ್ದಾರೆ.ನವದೆಹಲಿ ನಿವಾಸಕ್ಕೆ ಕರೆಸಿಕೊಂಡು ಬಿ.ಎಲ್‌ ಸಂತೋಷ್‌ ಅವ್ರನ್ನ ಕರೆಸಿಕೊಂಡಿರುವ ಪ್ರಧಾನಿ ಮೋದಿ, ಪ್ರಕರಣ ಕುರಿತ ಎಲ್ಲ ಮಾಹಿತಿಯನ್ನ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ.

ಡಾ.ಬಿ.ಆರ್.ಅಂಬೇಡ್ಕರ್‌ ಅವರ 131ನೇ ಜಯಂತಿ : ಸಂವಿಧಾನ ಶಿಲ್ಪಿಯನ್ನು ಸ್ಮರಿಸಿದ ಪ್ರಧಾನಿ ಮೋದಿ, ರಾಹುಲ್

ಈ ನಡುವೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ಸಂತೋಷ್ ಪಾಟೀಲ್ ಯಾವುದೇ ಡೆತ್ ನೋಟ್ ಬರೆದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ಸಂತೋಷ್ ಪಾಟೀಲ್ ಯಾವುದೇ ಡೆತ್ ನೋಟ್ ಬರೆದಿಲ್ಲ. ಕಾಮಗಾರಿಗೆ ಟೆಂಡರ್ ನೀಡಲು ಕೆಲವು ನಿಯಮಗಳಿರುತ್ತವೆ. ಆದರೆ ಟೆಂಡರ್ ನೀಡದೆಯೇ ಕಾಮಗಾರಿ ಮಾಡಲಾಗುತ್ತಾ? ಈ ವಿಚಾರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗೆ ಗೊತ್ತಿಲ್ವಾ?

ಇನ್ನೆರಡು ದಿನ ಮಳೆ ಅಬ್ಬರ; ಹವಾಮಾನ ಇಲಾಖೆ ಮುನ್ಸೂಚನೆ

ಡಿವೈಎಸ್ ಪಿ ಗಣಪತಿ ಪ್ರಕರಣದಲ್ಲಿ ಖುದ್ದು ಹೇಳಿಕೆ ನೀಡಿದ್ದರು. ಆಧರೆ ಈ ಪ್ರಕರಣದಲ್ಲಿ ಸಂತೋಷ್ ವಾಟ್ಸಪ್ ಟೈಪ್ ಮಾಡಿದ್ದಾರೆ. ನಾನು ಸಂತೋಷ್ ಪಾಟೀಲ್ ಮುಖ ಕೂಡ ನೋಡಿಲ್ಲ. ಅಂಥದರಲ್ಲಿ 80 ಬಾರಿ ಎಂದು ಆರೋಪಿಸಿದ್ದಾರೆ. ದೆಹಲಿಗೆ ಹೋಗಲು ಫ್ಲೈಟ್ ಟಿಕೆಟ್ ಬುಕ್ ಮಾಡಿದ್ಯಾರು? ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವರ ಕಚೇರಿಗೆ ದೂರು ನೀಡಿದ್ದಾರೆ.ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಕೋರಿದ ಸ್ಪಷ್ಟನೆಗೆ ನಮ್ಮ ಇಲಾಖೆ ಉತ್ತರ ನೀಡಿದ್ದೇವೆ. ಹೀಗಾಗಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಹೇಳಿದ್ದಾರೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link