ಜಿಎಸ್​ಟಿ ಬಾಕಿ : INFOSYS ವಾದ ಏನು ಗೊತ್ತಾ….?

ಬೆಂಗಳೂರು

    ವಿದೇಶಗಳಲ್ಲಿರುವ ತನ್ನ ಶಾಖಾ ಘಟಕಗಳಿಂದ ಸೇವೆ ಪಡೆದದ್ದಕ್ಕೆ ಇನ್ಫೋಸಿಸ್ ಜಿಎಸ್​ಟಿ ಪಾವತಿಸಿಲ್ಲ ಎಂದು ತೆರಿಗೆ ಇಲಾಖೆ ಆರೋಪಿಸಿದೆ. 2017ರಿಂದ 2022ರವರೆಗೆ ಐದು ವರ್ಷದಲ್ಲಿ ಬರೋಬ್ಬರಿ 32,403.46 ಕೋಟಿ ರೂ ಮೊತ್ತದ ಐಜಿಎಸ್​ಟಿ ಪಾವತಿಸಬೇಕು ಎಂದು ಇನ್ಫೋಸಿಸ್​ಗೆ ಬೆಂಗಳೂರಿನ ಜಿಎಸ್​ಟಿ ಅಧಿಕಾರಿಗಳು ನೋಟೀಸ್ ಕೊಟ್ಟಿದ್ದಾರೆ.

    ಕುತೂಹಲ ಎಂದರೆ ಬಾಕಿ ಇದೆ ಎನ್ನಲಾದ ಇಷ್ಟು ಐಜಿಎಸ್​ಟಿ ಹಣವು ಇನ್ಫೋಸಿಸ್​ನ ಐದು ವರ್ಷದ ಲಾಭಕ್ಕೆ ಸಮ ಎನ್ನಲಾಗಿದೆ. ಇನ್ಫೋಸಿಸ್ ಸಂಸ್ಥೆ ಜಿಎಸ್​ಟಿ ಪ್ರಾಧಿಕಾರದ ಈ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್ ಬಗ್ಗೆ ಪ್ರತಿಕ್ರಿಯಿಸಿದ್ದು, ತಾನು ಯಾವುದೇ ತೆರಿಗೆ ನಿಯಮ ಉಲ್ಲಂಘಿಸಿಲ್ಲ, ಅಥವಾ ಬಾಕಿ ಉಳಿಸಿಕೊಂಡಿಲ್ಲ ಎಂದು ಷೇರು ವಿನಿಯಮ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್​ನಲ್ಲಿ ತಿಳಿಸಿದೆ.

   ಇನ್ಫೋಸಿಸ್ ವಿದೇಶಗಳಲ್ಲಿ ಬ್ರ್ಯಾಂಚ್ ಆಫೀಸ್​ಗಳನ್ನು ಸ್ಥಾಪಿಸಿದೆ. ಆ ಶಾಖಾ ಕಚೇರಿಗಳಿಂದ ಪಡೆದ ಸರಬರಾಜುಗಳಿಗೆ ಸಂಸ್ಥೆ ಹಣ ಪಾವತಿಸಿದೆ. 2017ರ ಜುಲೈನಿಂದ ಆರಂಭವಾಗಿ 2021-22ರ ಹಣಕಾಸು ವರ್ಷದವರೆಗೆ ರಿವರ್ಸ್ ಚಾರ್ಜ್ ಮೆಕ್ಯಾನಿಸಂ ಅಡಿಯಲ್ಲಿ ಇನ್ಫೋಸಿಸ್ ಸಂಸ್ಥೆ 32,403.46 ಕೋಟಿ ರೂ ಐಜಿಎಸ್​ಟಿ ಪಾವತಿಸಬೇಕಿತ್ತು… ಇನ್ಫೋಸಿಸ್ ಸಂಸ್ಥೆ ತನ್ನ ಎಕ್ಸ್​ಪೋರ್ಟ್ ಇನ್ವಾಯ್ಸ್ ಅಡಿಯಲ್ಲಿ ಆ ವೆಚ್ಚಗಳನ್ನು ತೋರಿಸಿದೆ ಎಂದು ಕರ್ನಾಟಕ ರಾಜ್ಯ ಜಿಎಸ್​ಟಿ ಪ್ರಾಧಿಕಾರ ತನ್ನ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್​ನಲ್ಲಿ ತಿಳಿಸಿದೆ.

  ‘ವಿದೇಶಗಳಲ್ಲಿನ ಶಾಖಾ ಕಚೇರಿಗಳಿಂದ ಆದ ವೆಚ್ಚಕ್ಕೆ 32,403 ಕೋಟಿ ರೂ ಮೊತ್ತದ ಜಿಎಸ್​ಟಿ ಪಾವತಿ ಇದೆ ಎಂದು ಜಿಎಸ್​ಟಿ ಅಧಿಕಾರಿಗಳು ಪೂರ್ವಬಾವಿ ಶೋಕಾಸ್ ನೋಟೀಸ್ ನೀಡಿದ್ದಾರೆ. ಅದಕ್ಕೆ ಕಂಪನಿ ಸ್ಪಂದಿಸಿದೆ. ನಿಯಮಗಳ ಪ್ರಕಾರ ಈ ವೆಚ್ಚಗಳಿಗೆ ಜಿಎಸ್​ಟಿ ಅನ್ವಯ ಆಗಲ್ಲ. ಜಿಎಸ್​ಟಿ ಕೌನ್ಸಿಲ್​ನ ಶಿಫಾರಸುಗಳ ಮೇಲೆ ಸಿಬಿಡಿಟಿ ಮತ್ತು ಸುಂಕ ಇಲಾಖೆ 2024ರ ಜೂನ್ 26ರಂದು ಹೊರಡಿಸಿದ ಸುತ್ತೋಲೆ ಪ್ರಕಾರ, ಭಾರತೀಯ ಸಂಸ್ಥೆಯ ವಿದೇಶೀ ಶಾಖೆಗಳಿಂದ ನೀಡಲಾದ ಸೇವೆಗಳಿಗೆ ಜಿಎಸ್​ಟಿ ಅನ್ವಯ ಆಗಲ್ಲ ಎಂದಿದೆ’ ಎಂದು ಇನ್ಫೋಸಿಸ್​ನ ಕಂಪನಿ ಸೆಕ್ರೆಟರಿ ಮಣಿಕಂಠ ತಿಳಿಸಿದ್ದಾರೆ. 

    ಜಿಎಸ್​ಟಿ ಪಾವತಿಗಳು ಐಟಿ ಸರ್ವಿಸ್​ಗಳ ರಫ್ತಿಗೆ ಬದಲಾಗಿ ಕ್ರೆಡಿಟ್ ಅಥವಾ ರೀಫಂಡ್ ಪಡೆಯಲು ಅರ್ಹವಾಗಿರುತ್ತವೆ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾನೂನುಗಳಿಗೆ ಇನ್ಫೋಸಿಸ್ ಬದ್ಧವಾಗಿದ್ದು ಎಲ್ಲಾ ಜಿಎಸ್​ಟಿ ಬಾಕಿಯನ್ನು ಪಾವತಿಸಿದೆ ಎಂದೂ ಇನ್ಫೋಸಿಸ್ ಸಂಸ್ಥೆ ಸ್ಪಷ್ಟಪಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap