ತುಮಕೂರು:
ಕೆಲವು ಶಕ್ತಿಗಳಿಂದ ಆಹಾರ ಹಕ್ಕಿನ ಮೇಲೆ ದಾಳಿ: ಆರೋಪ
ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಿದ್ದು, ಅದನ್ನು ಸರ್ಕಾರ ಹೋಗಲಾಡಿಸಲು ಈಗಾಗಲೇ ಅಂಗನವಾಡಿ ಕೇಂದ್ರಗಳಲ್ಲಿ ಪೋಷಣ್ ಅಭಿಯಾನದ ಅಡಿ ಮೊಟ್ಟೆ ನೀಡುತ್ತಿದ್ದು, ಇತ್ತೀಚೆಗೆ ಕೆಲವು ಶಕ್ತಿಗಳು ಆಹಾರದ ಹಕ್ಕಿನ ಮೇಲೆ ದಾಳಿ ಮಾಡುತ್ತಿವೆ. ಗೊಂದಲಗಳಿಗೆ ಕಿವಿಗೊಡದೆ ಸರ್ಕಾರ ಮೊಟ್ಟೆಯ ವಿತರಣೆಯನ್ನು ಮುಂದುವರೆಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಿ.ಉಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಿದ್ದು, ಅದನ್ನು ಸರ್ಕಾರ ಹೋಗಲಾಡಿಸಲು ಈಗಾಗಲೇ ಅಂಗನವಾಡಿ ಕೇಂದ್ರಗಳಲ್ಲಿ ಪೋಷಣ್ ಅಭಿಯಾನದ ಅಡಿ ಮೊಟ್ಟೆ ನೀಡುತ್ತಿದ್ದು, ಯಾವುದೇ ಗೊಂದಲವಿಲ್ಲದೆ ಮಕ್ಕಳು ಸ್ವೀಕರಿಸುತ್ತಿದ್ದಾರೆ. ಕೆಲವು ಶಕ್ತಿಗಳು ಬಡವರ ಮತ್ತು ಬಹುಸಂಖ್ಯಾತರ ಆಹಾರದ ಹಕ್ಕಿನ ಮೇಲೆ ದಾಳಿ ಮಾಡುತ್ತಿವೆ ಎಂದರು.
ಜಿಲ್ಲೆಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ತಂತ್ರಗಳ ಸಂಚನ್ನು ರೂಪಿಸಿ ಸಮಾಜದ ಶಾಂತಿ ಕದಡುವುದು, ನೈತಿಕ ಪೋಲೀಸ್‍ಗಿರಿಯನ್ನು ಕೈಗೆತ್ತಿಕೊಂಡು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವುದನ್ನು ಜಿಲ್ಲಾಡಳಿತ ಮತ್ತು ಪೋಲೀಸ್ ಇಲಾಖೆ ತಡೆಯುವಂತೆ ಪೋಲೀಸ್ ಮುಖ್ಯಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸುವುದು ಹಾಗೂ ಜನವರಿ ತಿಂಗಳಲ್ಲಿ ಜನ ಐಕ್ಯತಾ ಸಾಂಸ್ಕøತಿಕ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ಸಭೆಯಲ್ಲಿ ರೈತ ಸಂಘಟನೆಯ ಅಜ್ಜಪ್ಪ, ಕಾರ್ಮಿಕ ಸಂಘಟನೆಗಳ ಗಿರೀಶ್, ಸೈಂiÀiದ್ ಮುಜೀಬ್, ಕೋಳಗೇರಿ ಹಿತರಕ್ಷಣಾ ಸಮಿತಿಯ ಎ.ನರಸಿಂಹಮೂರ್ತಿ, ಅರುಣ್, ದಲಿತ ಸಂಘಟನೆಯ ಪಿ.ಎನ್.ರಾಮಯ್ಯ, ಅಸೋಷಿಯೇಷನ್ ಪಾರ್ ಪ್ರೊಟೆಕ್ಷನ್ ಆಪ್ ಸಿವಿಲ್ ರೈಟ್ಸ್‍ನ ತಾಜುದ್ಧೀನ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ