ಪಾಕ್​ಗೆ ಮತ್ತೊಂದು ಆರ್ಥಿಕ ಹೊಡೆತ..!

ವಾಷಿಂಗ್ಟನ್​:
       ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಂದು ಹೊಡೆತವನ್ನು ನೀಡಿದ್ದು, ಪಾಕ್​ಗೆ ನೀಡುವ ಆರ್ಥಿಕ ನೆರವಿನಲ್ಲಿ 440 ಮಿಲಿಯನ್​ ಡಾಲರ್​ ಕಡಿತ ಮಾಡಲಾಗಿದೆ ಎಂದು ಶ್ವೇತ ಭವನ ತಿಳಿಸಿದೆ.
      ಪಾಕಿಸ್ತಾನ ಬಲವರ್ಧನೆ ಪಾಲುದಾರಿಕೆ ಒಪ್ಪಂದ 2010 ರ ಅನ್ವಯ ಪಾಕಿಸ್ತಾನಕ್ಕೆ ನೆರವು ನೀಡಲು ಅಮೆರಿಕ ನಿರ್ಧರಿಸಿತ್ತು . 2010 ರಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅದರ ಅನ್ವಯ ಕೆರ್ರಿ ಲ್ಯೂಗರ್​ ಬರ್ಮನ್​ (ಕೆಎಲ್​ಬಿ) ಕಾಯ್ದೆ ಅನ್ವಯ 5 ವರ್ಷಗಳ ಅವಧಿಯಲ್ಲಿ 7.5 ಬಿಲಿಯನ್​ ಡಾಲರ್​ ನೆರವು ನೀಡಲು ಅಮೆರಿಕ ಕಾಂಗ್ರೆಸ್​ ಒಪ್ಪಿಗೆ ನೀಡಿತ್ತು.ಪ್ರಸ್ತುತ ಕೆಎಲ್​ಬಿ ಕಾಯ್ದೆ ಅನ್ವಯ ಪಾಕಿಸ್ತಾನಕ್ಕೆ 4.5 ಬಿಲಿಯನ್​ ಡಾಲರ್​ ನೆರವು ನೀಡಬೇಕಿತ್ತು. ಅದರಲ್ಲಿ 440 ಮಿಲಿಯನ್​ ಡಾಲರ್​ ನೆರವನ್ನು ಕಡಿತ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಕೇವಲ 4.1 ಬಿಲಿಯನ್​ ಡಾಲರ್​ ನೆರವು ನೀಡಲಿದೆ.
     ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜತೆ ಮಾತುಕತೆ ನಡೆಸಿ ಪಾಕ್​ಗೆ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿದ್ದರು. ಆದರೆ, ಈಗ ಮತ್ತಷ್ಟು ಆರ್ಥಿಕ ನೆರವನ್ನು ಕಡಿತ ಮಾಡುವ ತೀರ್ಮಾನಕ್ಕೆ ಬಂದಿದೆ.
     ಉಗ್ರರ ವಿರುದ್ಧ ಸಮರ್ಪಕ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾದ ಹಿನ್ನೆಯಲ್ಲಿ ಅಮೆರಿಕ ಕಳೆದ ವರ್ಷದ ಸೆಪ್ಟಂಬರ್​ನಲ್ಲಿ 300 ಮಿಲಿಯನ್​ ಡಾಲರ್​ ನೆರವು ಕಡಿತ ಮಾಡಿತ್ತು. ಈ ವರ್ಷದ ಜನವರಿಯಲ್ಲಿ ಪೆಂಟಗಾನ್​ ಮತ್ತೆ 1 ಬಿಲಿಯನ್​ ಡಾಲರ್​ ನೆರವನ್ನು ಕಡಿತ ಮಾಡಿತ್ತು. ಈ ಹಿನ್ನೆಲೆಯಲ್ಲಿ ಒಟ್ಟು 1.3 ಬಿಲಿಯನ್​ ಡಾಲರ್​ ನೆರವು ಕಡಿತಗೊಂಡಿತ್ತು. 
.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap