ಇಸ್ರೆಲ್:
ಇಸ್ರೇಲ್ ನ ಪ್ರಧಾನಿ ವಿರುದ್ಧದ ಅವಿಶ್ವಾಸ ನಿರ್ಣಯದಿಂದಾಗಿ ಘೋಷಣೆಯಾಗಿದ್ದ ಮರುಚುನಾವಣೆಯಲ್ಲಿ ಇಸ್ರೇಲ್ ನ ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಚುನಾವಣಾ ಪ್ರಚಾರಕ್ಕಾಗಿ ತಮ್ಮ ಅಂತರಾಷ್ಟ್ರೀಯ ಸ್ನೇಹಿತರನ್ನು ಚುನಾವಣಾ ಪ್ರಚಾರದ ಸರಕಿನಂತೆ ಬಳಸುತ್ತಿದ್ದಾರೆ .
ತಮ್ಮ ಚುನಾವಣಾ ಪ್ರಚಾರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಮಂತ್ರಿ ಮೋದಿಯವರ ಭಾವಚಿತ್ರವಿರುವ ದೊಡ್ಡ ಬ್ಯಾನರ್ ಗಳನ್ನು ದೇಶದ ದೊಡ್ಡ ಕಟ್ಟಡಗಳ ಮೇಲೆ ಹಾಕಿಸಿರುವುದು ದೊಡ್ಡ ಸುದ್ದಿಯಾಗಿದೆ.
ಟೆಲ್ ಅವೀವ್‌ನಲ್ಲಿರುವ ನೆತನ್ಯಾಹು ಅವರ ಲಿಕುಡ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿದೆ.ಇಸ್ರೇಲ್ ನ ಇಬ್ರು ಭಾಷೆಯಲ್ಲಿ ಹಾಕಿಸಲಾಗಿರುವ ೀ ಬ್ಯಾನರ್ ಗಳು ನೇತನ್ಯಾಹು ಅವರ ಅಂತರಾಷ್ಟ್ರೀಯ ನೀತಿಯನ್ನು ಬಿಂಬಿಸುತ್ತದೆ ಎಂದು ಅವರ ಪಾರ್ಟಿ ತಿಳಿಸಿದೆ
ಮೇ 9 ರಲ್ಲಿ ಇಸ್ರೇಲಿ ಶಾಸಕರು 21 ನೇ ನೆಸ್ಸೆಟ್ (ಸಂಸತ್ತು) ವಿಸರ್ಜಿಸುವ ಪರವಾಗಿ 74-45 ಮತ ಚಲಾಯಿಸಿದರು ಮತ್ತು ಏಪ್ರಿಲ್ 9 ರ ಚುನಾವಣೆಯ ನಂತರ ನೆತನ್ಯಾಹು ಸಮ್ಮಿಶ್ರ ಸರ್ಕಾರವನ್ನು ರಚಿಸುವಲ್ಲಿ ವಿಫಲವಾದ ನಂತರ ಸೆಪ್ಟೆಂಬರ್ 17 ರಂದು ಅಭೂತಪೂರ್ವ ಮರುಚುನಾವಣೆ ನಡೆಸಲು ನಿರ್ಧರಿಸಲಾಗಿದೆ.ಇಸ್ರೇಲ್‌ನ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ನೆತನ್ಯಾಹು ಅವರು ಈ ಬಾರಿ ಕಠಿಣ ಮರುಚುನಾವಣೆಯ ಪ್ರಯತ್ನವನ್ನು ಎದುರಿಸುತ್ತಿದ್ದಾರೆ.