ಲಿಮಾ
ಪೆರುವಿನ ಹುವಾನುಕೊನಲ್ಲಿ ಪ್ರಯಾಣಿಕರ ಬಸ್ 200 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದು 10 ಮಂದಿ ಮೃತಪಟ್ಟಿದ್ದು, ಇತರೆ 20 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.ಕಾರ್ಪಿಶ್ ಸುರಂಗದಿಂದ ಜುನಿನ್ನ ಹುವಾಂಕಾಯೊದಿಂದ ಈಶಾನ್ಯ ಉಕಯಾಲಿಯದ ಪುಕಾಲ್ಪಾಗೆ ಹೋಗುವ ದಾರಿಯಲ್ಲಿ ಬಸ್ ರಸ್ತೆಯಿಂದ ಜಾರಿ ದುರಂತ ಸಂಭವಿಸಿದೆ.
ಟಿವಿ ವರದಿಗಳ ಪ್ರಕಾರ ಬಸ್ 200 ಮೀಟರ್ ಅಳದ ಕಂದಕಕ್ಕೆ ಬಿದ್ದಾಗ ಸುಮಾರು 50 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಮಳೆ, ಇಳಿ ಜಾರು ದಟ್ಟವಾದ ಮಂಜು ಮತ್ತು ವೇಗದ ಕಾರಣ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಈ ದುರಂತಕ್ಕೆ ಕಾರಣವಾಯಿತು ಎಂದೂ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ