ನವದೆಹಲಿ:
ಗೋಕರ್ಣ ದೇಗುಲವನ್ನು ರಾಮಚಂದ್ರಾಪುರ ಮಠ ಸುರ್ಪದಿಗೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಕಳೆದ ಕೆಲ ದಿನಗಳ ಹಿಂದೆ ರಾಜ್ಯ ಹೈಕೋರ್ಟ್ ಗೋಕರ್ಣ ದೇಗುಲವನ್ನು ರಾಜ್ಯ ಸರ್ಕಾರದ ಸುಪರ್ದಿಗೆ ನೀಡಿ ಆದೇಶ ನೀಡಿತ್ತು. ಬಳಿಕ ರಾಜ್ಯ ಸರ್ಕಾರ ದೇಗುಲವನ್ನು ಸುಪರ್ದಿಗೆ ತೆಗೆದುಕೊಳ್ಳಲು ಸೆಪ್ಟೆಂಬರ್ 17 ಮತ್ತು 18 ರಂದು ಆದೇಶ ಹೊರಡಿಸಿತ್ತು. ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ರಾಮಚಂದ್ರಪುರ ಮಠ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‍ನ ದ್ವಿಸದಸ್ಯ ಪೀಠ, ಈ ಅರ್ಜಿಯ ಅಂತಿಮ ತೀರ್ಪು ಬರುವ ವರೆಗೂ ಗೋಕರ್ಣ ದೇವಸ್ಥಾನವನ್ನು ಮಠದ ಸುರ್ಪದಿಗೆ ನೀಡಬೇಕೆಂದು ಮಧ್ಯಂತರ ಆದೇಶ ನೀಡಿದೆ.
ಗೋಕರ್ಣ ಮಹಾಬಲೇಶ್ವರ ದೇಗುಲವನ್ನು ಸೆಪ್ಟೆಂಬರ್ 7 ರಂದು ಇದ್ದ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ತಿಳಿಸಿದ್ದು. ಮುಂದಿನ ಆದೇಶದವರೆಗೂ ಇದೇ ಸ್ಥಿತಿ ಇರಲಿ ಎಂದ ನ್ಯಾ. ಕುರಿಯನ್ ಜೋಸಫ್ ಮತ್ತು ನ್ಯಾ. ಎ.ಎಂ. ಖಾನ್ವೀಳ್ಕರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
