ಇದಾಯಿ ಚಂಡಮಾರುತ: 192 ಮಂದಿಯನ್ನು ರಕ್ಷಿಸಿದ ಭಾರತೀಯ ನೌಕಾಪಡೆ

ಆಫ್ರಿಕಾದ

        ಮೊಜಾಂಬಿಕ್‌ನಲ್ಲಿ ಇದಾಯಿ ಚಂಡಮಾರುತಕ್ಕೆ ಸಿಲುಕ್ಕಿದ್ದ, ೧೯೨ ಮಂದಿಯನ್ನು ಭಾರತದ ನೌಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಭಾರತದ ಮೂರು ನೌಕೆಗಳಾದ ಐಎನ್‌ಎಸ್ ಸುಜಾತ, ಐಸಿಜಿಎಸ್ ಸಾರಥಿ ಮತ್ತು ಐಎನ್‌ಎಸ್ ಶಾರ್ದೂಲ ಅಲ್ಲಿನ ಸ್ಥಳೀಯ ಆಡಳಿತ ಹಾಗೂ ಭಾರತೀಯ ರಾಯಭಾರ ಕಚೇರಿಯೊಂದಿಗೆ ಕೈಜೋಡಿಸಿ ವಿಪತ್ತು ಪರಿಹಾರ ಮಾನವೀಯ ನೆರವು ಕಾರ್ಯಾಚರಣೆ ನಡೆಸಿವೆ.

        ಭಾರತೀಯ ನೌಕಪಡೆಯಿಂದ ನಿರ್ಮಿಸಲಾದ ವೈದ್ಯಕೀಯ ಶಿಬಿರಗಳಲ್ಲಿ ಸುಮಾರು ಒಂದು ಸಾವಿರದ ೪೦೦ ಜನರಿಗೆ ವೈದ್ಯಕೀಯ ಸೇವೆ ಒದಗಿಸಲಾಗಿದೆ. ವಿಪತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ಕೈಜೋಡಿಸಿದ ಚೇತಕ್ ಹೆಲಿಕ್ಯಾಪ್ಟರ್ ಹಲವಾರು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಯಶಸ್ವಿಯಾಗಿ ಸಾಗಿಸಿದೆ. ಅಲ್ಲದೇ ಆಹಾರ ಮತ್ತು ನೀರುಗಳ ಪೊಟ್ಟಣಗಳನ್ನು ವಿತರಣೆ ಮಾಡಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link