ಲಂಡನ್
ಬ್ರಿಟನ್ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಸಂಪುಟದಲ್ಲಿ ಭಾರತೀಯ ಮೂಲದ ಮೂವರಿಗೆ ಪ್ರಮುಖ ಸ್ಥಾನಗಳನ್ನು ಕಲ್ಪಿಸಿದ್ದಾರೆ. ಪ್ರೀತಿ ಪಟೇಲ್ ಅವರನ್ನು ಬ್ರಿಟಿಷ್ ಗೃಹ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಕಲ್ಪಿಸಿದ್ದಾರೆ.
ಇನ್ಪೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅಳಿಯ, ರಿಚ್ಮಂಡ್ ಕ್ಷೇತ್ರದ ಸಂಸದ ರಿಷಿ ಸುನಕ್ (39) ಅವರನ್ನು ಖಜಾನೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. 51 ವರ್ಷದ ಕಿರಿಯ ಸಚಿವ ಅಲೋಕ್ ಶರ್ಮಾ ಅವರಿಗೆ ಅಂತರರಾಷ್ಟ್ರೀಯ ಅಭಿವೃದ್ಧಿ ಇಲಾಖೆಯೊಂದಿಗೆ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ. ಬೋರಿಸ್ ಅವರ ಹೊಸ ಸಂಪುಟದಲ್ಲಿ ಮೂವರು ಭಾರತೀಯರಿಗೆ ಅವಕಾಶ ಲಭ್ಯವಾಗಿರುವುದು ಗಮನಾರ್ಹವಾಗಿದೆ.
ಬೋರಿಸ್ ಜಾನ್ಸನ್ ಸಂಪುಟದಲ್ಲಿ ಗೃಹ ಕಾರ್ಯದರ್ಶಿಯಾಗಿರುವ ಪ್ರೀತಿ ಪಟೇಲ್ ಗುಜರಾತ್ ಮೂಲದವರು. 2010 ರಲ್ಲಿ ಪ್ರೀತಿ ಮೊದಲ ಬಾರಿ ಕನ್ಸರ್ವೇಟಿವ್ ಪಕ್ಷದಿಂದ ಗೆಲುವು ಸಾಧಿಸಿದ್ದರು. ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಸಂಪುಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಹ್ಯಾಂಪ್‌ಶೈರ್ ಮೂಲದ ರಿಷಿ ಸುನಕ್ ಅವರು 2015 ರಿಂದ ರಿಚ್ಮಂಡ್ (ಯಾರ್ಕ್‌ಷೈರ್) ಕ್ಷೇತ್ರವನ್ನು ಪ್ರತಿನಿಧಿ ಸುತ್ತಿದ್ದಾರೆ. ಭಾರತ-ಬ್ರಿಟನ್ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ತರ ಕೆಲಸ ಮಾಡಿದ ಖ್ಯಾತಿ ಹೊಂದಿದ್ದಾರೆ .ಅಲೋಕದ ಶರ್ಮಾ ಆಗ್ರಾದಲ್ಲಿ ಜನಿಸಿದರು … ಥೆರೆಸಾ ಮೇ ಅವರ ಸರ್ಕಾರದಲ್ಲಿ ಉದ್ಯೋಗ ಸಚಿವರಾಗಿದ್ದರು. ಅವರು 2010 ರಿಂದ ರೀಡಿಂಗ್ ವೆಸ್ಟ್ ಕ್ಷೇತ್ರದಿಂದ ಸಂಸದರಾಗಿದ್ದಾರೆ. ಕನ್ಸರ್ವೇಟಿವ್ ನಾಯಕತ್ವ ಚುನಾವಣೆಯಲ್ಲಿ ಬೋರೀಸ್ ಜಾನ್ಸನ್ ಅವರನ್ನು ಬೆಂಬಲಿಸಿದವರಲ್ಲಿ ಇವರು ಒಬ್ಬರಾಗಿದ್ದರು.
ಮಾಜಿ ಪ್ರಧಾನಿ ಥೆರೆಸಾ ಮೇ ರಾಜೀನಾಮೆ ನೀಡಿದ ನಂತರ ಬೋರಿಸ್ ಜಾನ್ಸನ್ ಬುಧವಾರ ಬ್ರಿಟನ್‌ನ ಹೊಸ ಪ್ರಧಾನ ಮಂತ್ರಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದರು. ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸವನ್ನು ಪುನಃಸ್ಥಾಪಿಸುವುದಾಗಿ ಮತ್ತು ಭರವಸೆಗಳನ್ನು ಈಡೇರಿಸುವ ಭರವಸೆಯನ್ನು ನೂತನ ಪ್ರಧಾನಿ ನೀಡಿದ್ದಾರೆ. ಬ್ರೆಕ್ಸಿಟ್ ಎಂಬುದು ಬ್ರಿಟಿಷ್ ಜನರ ಮೂಲ ನಿರ್ಧಾರ. ಬ್ರೆಕ್ಸಿಟ್‌ಗೆ ಬದ್ಧವಾಗಿರುವುದಾಗಿ ಮತ್ತು ಅಕ್ಟೋಬರ್ 31 ರಂದು ಐರೋಪ್ಯ ಒಕ್ಕೂಟ ತೊರೆಯುವುದಾಗಿ ಘೋಷಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ