ಯೊಕೊಹಮಾ
ಜಪಾನ್‌ನ ಎರಡು ಸರಕು ಸಾಗಣೆ ಹಡಗುಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸಿಬ್ಬಂದಿ ಕಾಣೆಯಾಗಿರುವ ಘಟನೆ ಜಪಾನ್‌ನ ಪೂರ್ವದ ಪೆಸಿಫಿಕ್ ಸಾಗರದಲ್ಲಿ ನಡೆದಿದೆ ಎಂದು ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇಹೈಮ್ ಪ್ರಾಂತ್ಯದ ಇಮಾಬರಿ ಮೂಲದ ಸೆನ್ಶೋ ಮಾರು ಎಂಬ ಹಡಗು ಡಿಕ್ಕಿ ಹೊಡೆದು ಮುಳುಗಿದೆ, ಅದರಲ್ಲಿದ್ದ ಐವರು ಸಿಬ್ಬಂದಿಯ ಪೈಕಿ ನಾಲ್ವರು ಕಾಣೆಯಾಗಿದ್ದಾರೆ ಎಂದು ಜಪಾನ್ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
499 ಟನ್ ಸುಮಿಹೋ ಮಾರು ಮತ್ತು 499 ಟನ್‌ನ ಮತ್ತೊಂದು ಹಡಗು, ಸೆನ್ಶೋ ಮಾರು, ಚಿಬಾ ಪ್ರಾಂತ್ಯದ ಇನುಬಾಸಾಕಿಗೆ 12 ಕಿಲೋಮೀಟರ್ ದೂರದಲ್ಲಿ ಡಿಕ್ಕಿ ಹೊಡೆದಿದೆ ಎಂದು ಮೈನಿಚಿರಿ ಜಪಾನ್ ವರದಿ ಮಾಡಿದೆ.ಅಪಘಾತದ ನಂತರ ಸಹಾಯಕ್ಕಾಗಿ ಹಿರೋಶಿಮಾ ಪ್ರಾಂತ್ಯದ ಕುರೆ ಮೂಲದ ಸುಮಿಹೋ ಮಾರು ಹಡಗನ್ನು ಕಳುಹಿಸಲಾಗಿದೆ.
ಅಪಘಾತದ ಸಮಯದಲ್ಲಿ ದಟ್ಟವಾದ ಮಂಜು ಆ ಪ್ರದೇಶವನ್ನು ಆವರಿಸಿದ್ದುದರಿಂದ ಗೋಚರತೆಯು ಕಡಿಮೆಯಾಗಿತ್ತು. ಇದರಿಂದ ಅಪಘಾತ ಸಂಭವಿಸಿದೆ ಎಂದು ಕರಾವಳಿ ರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
