ದಾಳಿ ತಡೆಯುವಲ್ಲಿ ನಮ್ಮ ಲೋಪ ಇದೆ : ರನಿಲ್ ವಿಕ್ರಮಸಿಂಘೆ

ಕೊಲೊಂಬೊ:
       ಕೆಲ ದಿನಗಳ ಹಿಂದೆ ಶ್ರೀಲಂಕಾದಲ್ಲಿ ನಡೆದ  ಬಾಂಬ್ ಸ್ಫೋಟಗಳಿಗೆ  ಸಂಬಂಧಿಸಿದಂತೆ ಭಾರತ ಮೊದಲೇ ಸೂಚನೆ ನೀಡಿತ್ತು. ಆದರೆ ನಾವು ಕಡೆಗಣಿಸಿದ ಪರಿಣಾಮದಿಂದ ಈ ಅನಾಹುತ ನಡೆದಿದೆ ಮತ್ತು ನಮ್ಮ ಈ ವಿಚಾವಾಗಿ ಲೋಪವಾಗಿದೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ. 
      ಮಾಧ್ಯಮಗಳ ಘೋಷ್ಟಿಯಲ್ಲಿ ಮಾತನಾಡಿದ ರನಿಲ್ ಅವರು ಭಾರತ ನಮ್ಮೊಂದಿಗೆ ಕೆಲ ಗುಪ್ತಚರ ಮಾಹಿತಿಗಳನ್ನು ಹಂಚಿಕೊಂಡಿತ್ತು. ಅದನ್ನು ಬಳಸಿಕೊಳ್ಳುವಲ್ಲಿ ನಮ್ಮಿಂದ ಲೋಪವಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳ ಜೊತೆ ನಮ್ಮ ತನಿಖಾ ಸಂಸ್ಥೆಗಳು ನಿರಂತರ ಸಂಪರ್ಕದಲ್ಲಿವೆ. ದೇಶದ ಹೊರಗಿನ ಮಾಹಿತಿ ಕಲೆ ಹಾಕಲು ಇತರ ದೇಶಗಳ ತನಿಖೆ ಸಂಸ್ಥೆಗಳ ನೆರವನ್ನೂ ನಾವು ಕೇಳಿದ್ದೇವೆ ಎಂದರು.
        ಇನ್ನು ಬಾಂಬ್ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸೇಟ್ ಉಗ್ರ ಸಂಘಟನೆ ಹೊತ್ತು ಕೊಂಡಿದೆ ಮತ್ತು ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನ ಮಸೀದಿಗಳಲ್ಲಿ ನಡೆದಿದ್ದ ಗುಂಡಿನ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದೆ.

        ಕ್ರೈಸ್ಟ್ ಚರ್ಚ್ ಮೇಲಿನ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆದಿರುವ ಸಾಧ್ಯತೆಗಳಿವೆ. ಆದರೆ ಅದೇ ನಿಖರ ಕಾರಣ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇನ್ನು ತನಿಖೆ ನಡೆಸುತ್ತಿರುವ ಪೊಲೀಸರಷ್ಟೇ ಈ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯ ಎಂದು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link