ನ್ಯೂಯಾರ್ಕ್ : 4ವರ್ಷದ ಹಿಮಾಲಯನ್ ಹುಲಿಗೆ ಕೊರೋನಾ ಸೋಂಕು

ನ್ಯೂಯಾರ್ಕ್:

       ಅಮೆರಿಕದಲ್ಲಿ ಕೊರೋನಾ ವೈರಸ್ ಆರ್ಭಟ ಹೇಗಿದೆಯೆಂದರೆ ಮೃಗಾಲಯದಲ್ಲಿರುವ ಕಾಡು ಪ್ರಾಣಿಗಳಲ್ಲೂ ಸೋಂಕು ದೃಢವಾಗಿದೆ.

       ಬ್ರಾಂಕ್ಸ್ ಮೃಗಾಲಯದಲ್ಲಿರುವ 4 ವರ್ಷ ಪ್ರಾಯದ ಒಂದು ಹಿಮಾಲಯನ್ ಹುಲಿಗೆ ಸೋಂಕು ತಗುಲಿದ್ದು, ಇತ್ತೀಚೆಗೆ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಇದು ದೃಢವಾಗಿದೆ. ಅಂತೆಯೇ ಈ ಒಂದು ಹುಲಿ ಮಾತ್ರವಲ್ಲದೇ ಈ ಹುಲಿ ಜೊತೆಗಿದ್ದ ಇತರೆ 6 ಹುಲಿಗಳು  ಹಾಗೂ ಸಿಂಹಗಳೂ ಅನಾರೋಗ್ಯಕ್ಕೆ ತುತ್ತಾಗಿದೆ. ಆ ಮೂಲಕ ಅಮೆರಿಕದಲ್ಲಿ ವೈರಸ್ ಕಾಣಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಾಣಿಗಳಲ್ಲಿ ವೈರಸ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಅಮೆರಿಕ ಮಾತ್ರವಲ್ಲದೇ ವಿಶ್ವಾದ್ಯಂತ ಕಾಡು ಪ್ರಾಣಿಯಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡ ಮೊದಲ  ಪ್ರಸಂಗ ಇದಾಗಿದೆ.

      ಈ ಬಗ್ಗೆ ಮಾತನಾಡಿರುವ ಅಮೆರಿಕದ ಕೃಷಿ ಇಲಾಖೆ ಅಧಿಕಾರಿಗಳು, ಮಾರ್ಚ್ 27ರಂದು ಹುಲಿ ತೀವ್ರ ಜ್ವರಕ್ಕೆ ತುತ್ತಾಗಿತ್ತು. ಅಲ್ಲದೆ ವೈರಸ್ ಸಂಬಂಧಿತ ಲಕ್ಷಣಗಳೂ ಗೋಚರವಾಗುತ್ತಿತ್ತು. ಇದೇ ಕಾರಣಕ್ಕೆ ಹುಲಿಯನ್ನು ವೈದ್ಯಕೀಯ ತಪಾಸಣೆಗೊಳ ಪಡಿಸಲಾಗಿತ್ತು. ಇದೀಗ ಹುಲಿಯಲ್ಲಿ  ಸೋಂಕು ದೃಢಪಟ್ಟಿದ್ದು, ಇತರೆ ಹುಲಿಗಳಿಗೂ ಈ ಸೋಂಕು ತಗುಲಿರುವ ಶಂಕೆ ಇದೆ. ಹೀಗಾಗಿ ಎಲ್ಲ ಹುಲಿಗಳನ್ನೂ ಪ್ರತ್ಯೇಕವಾಗಿರಿಸಲಾಗಿದ್ದು, ಇತರೆ ಹುಲಿಗಳನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap