ಮಾಸ್ಕೋ
ವಾಯುವ್ಯ ಇರಾನ್ ನಲ್ಲಿ ಕಾಣಿಸಿಕೊಂಡಿರುವ 5.9 ತೀವ್ರತೆಯ ಭೂಕಂಪನದಿಂದ 4 ಜನರು ಮೃತಪಟ್ಟಿದ್ದು, ಸುಮಾರು 70 ಜನರಿಗೆ ಗಾಯಗಳಾಗಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.ಯೂರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ ದತ್ತಾಂಶದ ಪ್ರಕಾರ ಶುಕ್ರವಾರ ಬೆಳಗ್ಗೆ ಇರಾನ್ ನಲ್ಲಿ 5.7ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರ ಸ್ಥಾನ ತಬ್ರೀಜ್ ನಗರದ ಪೂರ್ವದ 118 ಕಿಲೋಮೀರ್ಟ ದೂರದಲ್ಲಿತ್ತು.
ಭೂಕಂಪನ ಸಕ್ರಿಯವಾಗಿರುವ ವಲಯದಲ್ಲಿರುವ ಇರಾನ್ ಆಗಾಗ್ಗೆ ತೀವ್ರ ಭೂಕಂಪಗಳಿಗೆ ತುತ್ತಾಗುತ್ತಿರುತ್ತದೆ. 2017ರ ನವೆಂರ್ಬ ನಲ್ಲಿ ಇರಾನ್-ಇರಾಕ್ ಗಡಿಯಲ್ಲಿ ಸಂಭವಿಸಿದ 7.2 ತೀವ್ರತೆಯ ಮಾರಣಾಂತಿಕ ಭೂಕಂಪದಲ್ಲಿ ನೂರಾರು ಜನರು ಮೃತಪಟ್ಟು ಸಾವಿರಾರು ಜನರು ಗಾಯಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
