ನ್ಯೂ ಕ್ಯಾಲಡೋನಿಯಾದಲ್ಲಿ 5.9 ತೀವ್ರತೆಯ ಭೂಕಂಪನ

ಹಾಂಗ್‍ಕಾಂಗ್‍

  ನ್ಯೂ ಕ್ಯಾಲಡೋನಿಯಾದ ಟ್ಯಾಡಿನ್‍ನ 174 ಕಿ.ಮೀ.ಪೂರ್ವಕ್ಕೆ ಭಾನುವಾರ 5.9 ತೀವ್ರತೆಯ ಭೂ ಕಂಪನವಾಗಿದೆ ಎಂದು ಅಮೆರಿಕ ಭೂವಿಜ್ಞಾನ ಸಮೀಕ್ಷೆ ತಿಳಿಸಿದೆ.

    ಭೂ ಕಂಪನದ ಕೇಂದ್ರ ಬಿಂದು, 10 ಕಿ.ಮೀ. ಆಳದೊಂದಿಗೆ ಆರಂಭದಲ್ಲಿ 21.7287 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 169.5597 ಡಿಗ್ರಿ ಪೂರ್ವದ ರೇಖಾಂಶದಲ್ಲಿದೆ ಎಂದು ನಿರ್ಧರಿಸಲಾಯಿತು ಎಂದು ಸಂಸ್ಥೆ ತಿಳಿಸಿದೆ.ಭೂಕಂಪನದಿಂದ ಸಾವು-ನೋವು ಆಗಿರುವ ಬಗ್ಗೆ ವರದಿಯಾಗಿಲ್ಲ. ಭೂ ಕಂಪನದಿಂದ ಜನರು ಭಯಭೀತರಾಗಿ ಮನೆ, ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ ಎಂದು ವರದಿ ತಿಳಿಸಿದೆ.

Recent Articles

spot_img

Related Stories

Share via
Copy link
Powered by Social Snap