ಮಸೀದಿಯಲ್ಲಿ ಬಾಂಬ್ ಸ್ಫೋಟ: 5 ಜನರ ಸಾವು

ಬಲೂಚಿಸ್ತಾನ

   ಬಲೂಚಿಸ್ತಾನದ ಮಸೀದಿಯೊಂದರಲ್ಲಿ ಇಂದು ಬಾಂಬ್ ಸ್ಫೋಟ ಸಂಭವಿಸಿದ್ದು ಸುಮಾರು 5 ಜನ ಮೃತಪಟ್ಟಿದ್ದಾರೆ.ಕುಚ್ಲಕ್ ಪ್ರದೇಶದಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಸುಮಾರು15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ .

    ಮಸೀದಿಯ ಒಳಗೆ ಇರಿಸಲಾಗಿದ್ದ ಐಇಡಿ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರದ ನಮಾಜ್ ಗೆ ಮಸೀದಿಯಲ್ಲಿ ಸಾಕಷ್ಟು ಜನ ಜಮಾಯಿಸಿದ್ದರು ಎನ್ನಲಾಗಿದೆ.

   ಘಟನೆ ನಡೆಯುತ್ತಲೇ ಧಾವಿಸಿದ ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರಿದು ಬಾಂಬ್ ನಿಷ್ಕ್ರಿಯ ದಳದವರಿಂದ ಸ್ಫೋಟ ಸ್ಥಳದ ಸುತ್ತಮುತ್ತ ಶೋಧ ಕಾರ್ಯ ನಡೆಸುತ್ತಿದ್ದಾರೆ.ಬಾಂಬ್ ಸ್ಫೋಟಕ್ಕೆ ಯಾರು ಕಾರಣ ಎಂಬುದು ಇನ್ನೂ ಗೊತ್ತಾಗಿಲ್ಲ. ಯಾವ ಸಂಘಟನೆಯೂ ಈವರೆಗೆ ಇದರ ಹೊಣೆ ಹೊತ್ತುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪಾಕಿಸ್ತಾನದಿಂದ ಪ್ರತ್ಯೇಕವಾಗಲು ನಿರಂತರವಾಗಿ ಹೋರಾಟ ನಡೆಯುತ್ತಿರುವ ಬಲೂಚಿಸ್ತಾನದಲ್ಲಿ ಬಾಂಬ್ ಸ್ಫೋಟಗಳು ಸರ್ವೇಸಾಮಾನ್ಯ ಎನಿಸುವಷ್ಟರ ಮಟ್ಟಿಗೆ ಸಂಭವಿಸುತ್ತಿರುತ್ತವೆ. ಕಳೆದ ಕೆಲ ತಿಂಗಳಲ್ಲಿ ಅನೇಕ ಬಾರಿ ಇಲ್ಲಿ ಬಾಂಬ್ ಸ್ಫೋಟಗಳಾಗಿವೆ. ಏಪ್ರಿಲ್ ತಿಂಗಳಲ್ಲಿ ಕ್ವೆಟ್ಟಾ ನಗರದ ಮಸೀದಿಯೊಂದರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟಕ್ಕೆ ಬರೋಬ್ಬರಿ 16 ಮಂದಿ ಬಲಿಯಾಗಿದ್ದರು. ಜನಸಂದಣಿ ಹೆಚ್ಚಿರುವ ಮಾರುಕಟ್ಟೆ ಪ್ರದೇಶವಾದ ಹಜಾರ್​ ಗಂಜ್​ನಲ್ಲಿ ಆ ದುರಂತ ಸಂಭವಿಸಿತ್ತು .ಹಾಗೆಯೇ ಮೇ ತಿಂಗಳಲ್ಲಿ ಇದೇ ಕ್ವೆಟ್ಟಾ ನಗರದ ಮತ್ತೊಂದು ಮಸೀದಿಯಲ್ಲಿ ಬಾಂಬ್ ಸ್ಫೋಟವಾಗಿ ನಾಲ್ವರು ಪೊಲೀಸರು ಬಲಿಯಾಗಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap